* ಕೇಂದ್ರ ಸರ್ಕಾರ 2027ರ ಮಾರ್ಚ್ 1ರಿಂದ ಜನಗಣತಿ ಹಾಗೂ ಜಾತಿಗಣತಿಯನ್ನು ಆರಂಭಿಸಲು ತೀರ್ಮಾನಿಸಿದೆ. ಈ ಕಾರ್ಯ ಎರಡು ಹಂತಗಳಲ್ಲಿ ನಡೆಯಲಿದೆ.* ಹಿಮಪಾತದ ಪ್ರಭಾವ ಇರುವ ಪ್ರದೇಶಗಳಲ್ಲಿ ಲಡಾಖ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ 2026ರ ಅಕ್ಟೋಬರ್ 1ರಿಂದಲೇ ಗಣತಿ ಪ್ರಕ್ರಿಯೆ ಆರಂಭವಾಗಲಿದೆ.* ಈ ಕುರಿತು ಗೃಹ ಸಚಿವಾಲಯ ಜೂನ್ 16ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಿದ್ದು, ನಂತರ ಗಣತಿ ಪ್ರಕ್ರಿಯೆ ಶುರುವಾಗಲಿದೆ. ಕೊನೆಗೂ ಜನಗಣತಿ 2011ರಲ್ಲಿ ನಡೆದಿದ್ದು, 2021ರ ಜನಗಣತಿಯನ್ನು ಕೋವಿಡ್ ಕಾರಣದಿಂದ ಮುಂದೂಡಲಾಗಿತ್ತು.* 1931ರ ಬಳಿಕ ಇದೇ ಮೊದಲ ಬಾರಿ ದೇಶದಲ್ಲಿ ಜಾತಿಗಣತಿ ನಡೆಯುತ್ತಿದೆ. ವಿರೋಧ ಪಕ್ಷಗಳ ಒತ್ತಡದ ನಡುವೆ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ. ಪಹಲ್ಗಾಮ್ ದಾಳಿಯ ನಂತರವೇ ಈ ಘೋಷಣೆ ಹೊರಬಿದ್ದದ್ದು ಗಮನಾರ್ಹ.* ದೇಶದಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಜನಗಣತಿ ಪ್ರಕ್ರಿಯೆ ಅಳವಡಿಸಲಾಗುತ್ತಿದೆ. ನಾಗರಿಕರು ತಮ್ಮ ವಿವರಗಳನ್ನು ಆನ್ಲೈನ್ನಲ್ಲಿ ತಾವೇ ನಮೂದಿಸುವ ವ್ಯವಸ್ಥೆ ಇರುತ್ತದೆ.* ಜನಗಣತಿ ನಂತರ ಅಂದಾಜು ಜನಸಂಖ್ಯೆ ತೀರ್ಮಾನವಾಗಲಿದ್ದು, ಅಂತಿಮ ವರದಿ 2029–30ರಲ್ಲಿ ನಿರೀಕ್ಷಿಸಲಾಗಿದೆ. ಈ ವರದಿ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಆಯೋಗ ರಚನೆಗೊಂಡು, ನಂತರವೇ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿ ಸಾಧ್ಯವಾಗಲಿದೆ.