* ಕೇಂದ್ರ ಸರ್ಕಾರವು 2027ರ ಜನಗಣತಿ ಕುರಿತು ಜೂನ್ 16, 2025ರಂದು ಅಧಿಸೂಚನೆ ಹೊರಡಿಸಿದೆ. ಲಡಾಕ್ನಲ್ಲಿ ಇದು ಅಕ್ಟೋಬರ್ 1, 2026ರಿಂದ ಆರಂಭವಾಗಲಿದ್ದು, ಉಳಿದ ಭಾರತದಾದ್ಯಂತ ಮಾರ್ಚ್ 1, 2027ರಿಂದ ಜನಗಣತಿ ಕಾರ್ಯ ನಡೆಯಲಿದೆ.* ಕೊನೆಯ ಬಾರಿ ಜನಗಣತಿ 2011ರಲ್ಲಿ ನಡೆದಿತ್ತು. 2027ರ ಜನಗಣತಿ ಭಾರತದ 16ನೇ ಜನಗಣತಿಯಾಗಿದ್ದು, ಈ ಬಾರಿ ಜಾತಿ ಗಣತಿಯೂ ಸಹ ಸೇರಲಿದೆ.* ಜನಗಣತಿಯಲ್ಲಿ ಸುಮಾರು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಭಾಗವಹಿಸಲಿದ್ದಾರೆ. ಜೊತೆಗೆ 1.3 ಲಕ್ಷ ಜನಗಣತಿ ಅಧಿಕಾರಿಗಳು ಡಿಜಿಟಲ್ ಸಾಧನಗಳ ಸಹಾಯದಿಂದ ಕಾರ್ಯನಿರ್ವಹಿಸಲಿದ್ದಾರೆ.* ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನಗಣತಿಯ ಸಿದ್ಧತೆಗಳನ್ನು ಪರಿಶೀಲಿಸಿದರು. ಅವರ ಜೊತೆ ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಜನಗಣತಿ ಆಯುಕ್ತರು ಇದ್ದರು.* ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದೆ:- ಮನೆ ಪಟ್ಟಿ ಕಾರ್ಯಾಚರಣೆ (HLO): ವಸತಿ, ಆಸ್ತಿ, ಸೌಲಭ್ಯಗಳ ಮಾಹಿತಿ ಸಂಗ್ರಹ.- ಜನಸಂಖ್ಯಾ ಎಣಿಕೆ (PE): ವ್ಯಕ್ತಿಗಳ ಆರ್ಥಿಕ, ಸಾಂಸ್ಕೃತಿಕ ವಿವರಗಳ ಸಂಗ್ರಹ.* ದತ್ತಾಂಶ ಭದ್ರತೆಗೆ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.