* ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ(ಮೇ 07) ತಿಳಿಸಿದಂತೆ, ಭಾರತ ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಗಗನಯಾನವನ್ನು 2027ರ ಆರಂಭದಲ್ಲಿ ನಡೆಸುವ ನಿರೀಕ್ಷೆಯಿದೆ.* ಮೋದಿ ಜಾಗತಿಕ ಬಾಹ್ಯಾಕಾಶ ಅನ್ವೇಷಣಾ ಸಮ್ಮೇಳನಕ್ಕೆ ನೀಡಿದ ಧ್ವನಿಮುದ್ರಿತ ಸಂದೇಶದಲ್ಲಿ, “2035ರ ಒಳಗೆ ಭಾರತದಲ್ಲಿ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಹಾಗೂ 2040ರ ಹೊತ್ತಿಗೆ ಚಂದ್ರನತ್ತ ಗಗನಯಾತ್ರಿಗಳನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ” ಎಂದು ತಿಳಿಸಿದ್ದಾರೆ.* ಭಾರತದ ಬಾಹ್ಯಾಕಾಶ ಪ್ರಯತ್ನಗಳು ಯಾವುದೇ ರಾಷ್ಟ್ರದೊಂದಿಗೆ ಸ್ಪರ್ಧಿಸಲು ಅಲ್ಲ, ಬದಲಾಗಿ ಎಲ್ಲರ ಸಹಯೋಗದಿಂದ ಮುಂದುವರಿಯುವ ಗುರಿಯಲ್ಲಿವೆ.* ಭಾರತದ ಜಿ-20 ಉಪಗ್ರಹವನ್ನೂ ಶೀಘ್ರದಲ್ಲೇ ಉಡಾವಣೆ ಮಾಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.