* 2026ರ ಏಷ್ಯನ್ ಗೇಮ್ಸ್ ಜಪಾನ್ನ ಐಚಿ-ನಗೊಯಾದಲ್ಲಿ ನಡೆಯಲಿದ್ದು, ತೇಲುವ ಕ್ರೀಡಾ ಗ್ರಾಮವೊಂದನ್ನು ಅಲ್ಲಿ ಸ್ಥಾಪಿಸಲು ಆಯೋಜಕರು ಯೋಜನೆ ರೂಪಿಸಿದ್ದಾರೆ.* ಕಟ್ಟಡ ನಿರ್ಮಾಣಕ್ಕಿಂತ ವೆಚ್ಚ ಉಳಿತಾಯಕ್ಕಾಗಿ, ಆಯೋಜಕರು ಐಷಾರಾಮಿ ಕ್ರೂಸ್ ಹಡಗಿನಲ್ಲೇ ಸುಮಾರು 4600 ಕ್ರೀಡಾಪಟು ಹಾಗೂ ಅಧಿಕಾರಿಗಳಿಗೆ ವಾಸದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಿದ್ದಾರೆ.* ಈ ಹಡಗಿನೊಳಗೇ ಜಿಮ್ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಿದ್ದಾರೆ.* ಈ ಕ್ರೀಡಾಕೂಟದಲ್ಲಿ 45 ದೇಶಗಳಿಂದ ಅಥ್ಲೀಟ್ ಗಳು, ಕೋಚ್ ಗಳು ಹಾಗೂ ಅಧಿಕಾರಿಗಳು ಸೇರಿ ಸುಮಾರು 15000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.* ಸುಮಾರು 2400ಕ್ಕೂ ಹೆಚ್ಚು ಮಂದಿಗೆ ಹಡಗುಕಟ್ಟೆಯ ಮ್ಯಾದಿರುವ ರೆಸಾರ್ಟ್ಗಳಲ್ಲಿ ವಾಸದ ವ್ಯವಸ್ಥೆ ಮಾಡಲಾಗುತ್ತದೆ. ಉಳಿದವರಿಗೆ ತಾತ್ಕಾಲಿಕ ಹಡಗು ಕಂಟೇನರ್ಗಳಲ್ಲಿ ಕೊಠಡಿಗಳನ್ನು ನಿರ್ಮಿಸಲು ಯೋಜಿಸಲಾಗಿದೆ.* ಈ ಗೇಮ್ಸ್ 2026ರ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದ್ದು, ಚಂಡಮಾರುತದ ಸಾಧ್ಯತೆ ಇರುವುದರಿಂದ ಅದರ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.