* 2026ರ ಆಗಸ್ಟ್ನಲ್ಲಿ ನಡೆಯಲಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಹೊಸದಿಲ್ಲಿ ಆತಿಥೇಯ ನಗರವಾಗಿ ಆಯ್ಕೆಯಾಗಿದೆ ಎಂದು ಬಿಡಬ್ಲ್ಯುಎಫ್ ಪ್ರಕಟಿಸಿದೆ.* 2009ರಲ್ಲಿ ಹೈದರಾಬಾದ್ನಲ್ಲಿ ನಡೆದ ನಂತರ, 17 ವರ್ಷಗಳ ಬಳಿಕ ಭಾರತ ಈ ಪ್ರತಿಷ್ಠಿತ ಟೂರ್ನಿಯನ್ನು ಆತಿಥ್ಯ ವಹಿಸಲಿದೆ.* ಪ್ಯಾರಿಸ್ನಲ್ಲಿ ನಡೆದ 2025ರ ಚಾಂಪಿಯನ್ಶಿಪ್ ಸಮಾರೋಪ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು. ಈ ವೇಳೆ ಬಿಡಬ್ಲ್ಯುಎಫ್ ಅಧ್ಯಕ್ಷ ಖುನ್ ಯಿಂಗ್ ಪಟಾಮಾ, ಫ್ರಾನ್ಸ್ ಒಕ್ಕೂಟದ ಅಧ್ಯಕ್ಷ ಫ್ರಾಂಕ್ ಲಾರೆಂಟ್ ಮತ್ತು ಭಾರತದ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ಮಿಶ್ರಾ ನಡುವೆ ಸಾಂಕೇತಿಕ ಹಸ್ತಾಂತರ ನಡೆಯಿತು.* ದಿಲ್ಲಿಯಲ್ಲಿ ಚಾಂಪಿಯನ್ಶಿಪ್ ನಡೆಯುವುದರಿಂದ 8 ವರ್ಷಗಳ ಬಳಿಕ ಟೂರ್ನಿ ಏಷ್ಯಾಕ್ಕೆ ಮರಳಲಿದೆ. 2018ರಲ್ಲಿ ಚೀನಾದ ನಾಂಜಿಂಗ್ನಲ್ಲಿ ಕೊನೆಯ ಬಾರಿ ಏಷ್ಯಾದಲ್ಲಿ ಆಯೋಜಿಸಲಾಗಿತ್ತು.* ಭಾರತವು 2011ರಿಂದ ನಿರಂತರವಾಗಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಪದಕಗಳನ್ನು ಗೆಲ್ಲುತ್ತಿದೆ.* ಪಿ.ವಿ. ಸಿಂಧು 2019ರಲ್ಲಿ ಚಿನ್ನದ ಪದಕ ಗೆದ್ದರೆ, ಸೈನಾ ನೆಹ್ವಾಲ್ ಬೆಳ್ಳಿ (2015) ಹಾಗೂ ಕಂಚು (2017) ಗೆದ್ದಿದ್ದರು. ಇತ್ತೀಚೆಗೆ ಪುರುಷ ಆಟಗಾರರು ಸಹ ಪದಕ ಗೆದ್ದು ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಸಾಧನೆ ತಂದುಕೊಟ್ಟಿದ್ದಾರೆ.