Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
2026ರ ಬನಾರಸ್ ಸಾಹಿತ್ಯ ಹಬ್ಬದ ಪ್ರಶಸ್ತಿಗಳ ಘೋಷಣೆ: ಸಾಹಿತ್ಯ ಲೋಕದ ಸಾಧಕರಿಗೆ ಸನ್ಮಾನ
Authored by:
Akshata Halli
Date:
24 ಜನವರಿ 2026
➤
ಉತ್ತರಪ್ರದೇಶದ ವಾರಣಾಸಿಯಲ್ಲಿ (ಬನಾರಸ್) ನಡೆದ
2ನೇ ಆವೃತ್ತಿಯ ಬನಾರಸ್ ಲಿಟರೇಚರ್ ಫೆಸ್ಟಿವಲ್
ನಲ್ಲಿ 2026ನೇ ಸಾಲಿನ ಪ್ರತಿಷ್ಠಿತ ಪುಸ್ತಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಭಾರತೀಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಹಿತಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಜನವರಿ 30 ರಿಂದ ಫೆಬ್ರವರಿ 1, 2026 ರವರೆಗೆ ವಾರಣಾಸಿಯಲ್ಲಿ ನಡೆಯಲಿದೆ. ಜೀವಮಾನ ಸಾಧನೆ ಪ್ರಶಸ್ತಿಗೆ
1 ಲಕ್ಷ ರೂ.
ಹಾಗೂ ಇತರ ವಿಭಾಗದ ಪ್ರಶಸ್ತಿಗಳಿಗೆ ತಲಾ
51,000 ರೂ.
ನಗದು ಬಹುಮಾನ ನೀಡಲಾಗುತ್ತದೆ.
➤ ಜೀವಮಾನ ಸಾಧನೆ ಪ್ರಶಸ್ತಿ (Lifetime Achievement Award):
ಖ್ಯಾತ ಸಾಹಿತಿ ಮತ್ತು ಜೈಪುರ ಸಾಹಿತ್ಯ ಹಬ್ಬದ (JLF) ಸಹ-ಸಂಸ್ಥಾಪಕಿ
ನಮಿತಾ ಗೋಖಲೆ
ಅವರಿಗೆ ಈ ವರ್ಷದ 'ಭಾರತೇಂದು ಹರಿಶ್ಚಂದ್ರ ಜೀವಮಾನ ಸಾಧನೆ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗಿದೆ. ಇವರ ಚೊಚ್ಚಲ ಕಾದಂಬರಿ
'ಪಾರೋ: ಡ್ರೀಮ್ಸ್ ಆಫ್ ಪ್ಯಾಶನ್'
ಸಾಹಿತ್ಯ ಲೋಕದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ ಹೌದು.
➤ ಇಂಗ್ಲಿಷ್ ಭಾಷಾ ವಿಭಾಗದ ಪ್ರಶಸ್ತಿಗಳು:
1.
ಶಿನಿ ಆಂಟೋನಿ
ಅವರು ಬರೆದ
'ಈಡನ್ ಅಬ್ಯಾಂಡನ್ಡ್: ದಿ ಸ್ಟೋರಿ ಆಫ್ ಲಿಲಿತ್'
(Eden Abandoned: The Story of Lilith) ಎಂಬ ಕೃತಿಗೆ ಕಾದಂಬರಿ ವಿಭಾಗದಲ್ಲಿ ಪ್ರತಿಷ್ಠಿತ
ರಸ್ಕಿನ್ ಬಾಂಡ್ ಪ್ರಶಸ್ತಿ
ಯನ್ನು ನೀಡಲಾಗಿದೆ.
2.
ಕವಿತೆ ವಿಭಾಗದಲ್ಲಿ,
'ದಿ ಹನುಮಾನ್ ಚಾಲೀಸಾ'
(The Hanuman Chalisa) ಕೃತಿಗಾಗಿ ಪ್ರಸಿದ್ಧ ಕವಿ
ಅಭಯ್ ಕೆ.
ಅವರಿಗೆ
ಸರೋಜಿನಿ ನಾಯ್ಡು ಪ್ರಶಸ್ತಿ
ಯನ್ನು ನೀಡಿ ಗೌರವಿಸಲಾಗಿದೆ.
3.
ಭಾಷಾಶಾಸ್ತ್ರಜ್ಞೆ ಮತ್ತು ಲೇಖಕಿ
ಪೆಗ್ಗಿ ಮೋಹನ್
ಅವರು ರಚಿಸಿದ
'ಫಾದರ್ ಟಂಗ್, ಮದರ್ಲ್ಯಾಂಡ್: ದಿ ಬರ್ತ್ ಆಫ್ ಲ್ಯಾಂಗ್ವೇಜ್ ಇನ್ ಸೌತ್ ಏಷ್ಯಾ'
(Father Tongue, Motherland) ಎಂಬ ಸಂಶೋಧನಾತ್ಮಕ ಕೃತಿಗೆ ಲಲಿತ ಪ್ರಬಂಧ (Non-Fiction) ವಿಭಾಗದ
ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ
ಲಭಿಸಿದೆ.
4.
ಅನುವಾದ ವಿಭಾಗದಲ್ಲಿ, ಶಂಕರ್ ಅವರ ಬಂಗಾಳಿ ಕೃತಿಯನ್ನು ಇಂಗ್ಲಿಷ್ಗೆ
'ಲಿಮಿಟೆಡ್ / ಅನ್ಲಿಮಿಟೆಡ್'
(Limited / Unlimited) ಎಂದು ಅನುವಾದಿಸಿದ
ಅರುಣವ ಸಿನ್ಹಾ
ಅವರಿಗೆ
ರವೀಂದ್ರನಾಥ ಟ್ಯಾಗೋರ್ ಪ್ರಶಸ್ತಿ
ಯನ್ನು ನೀಡಿ ಪುರಸ್ಕರಿಸಲಾಗಿದೆ.
➤ ಹಿಂದಿ ಸಾಹಿತ್ಯ ಪ್ರಶಸ್ತಿಗಳು:
ಹಿಂದಿ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದವರಿಗೆ ಈ ಕೆಳಗಿನ ಪ್ರಶಸ್ತಿಗಳನ್ನು ನೀಡಲಾಗಿದೆ:
1.
ಪ್ರೇಮಚಂದ್ ಪ್ರಶಸ್ತಿ (ಕಾದಂಬರಿ):
ಮಮತಾ ಕಾಲಿಯಾ (
ದೂರಸ್ಥ ದಾಂಪತ್ಯ
ಕೃತಿಗೆ).
2.
ಕಬೀರ್ ಪ್ರಶಸ್ತಿ (ಕವಿತೆ):
ಉದಯನ್ ವಾಜಪೇಯಿ (
ಪಾಗಲ್ ಗಣಿತಜ್ಞ ಕಿ ಕವಿತಾಯೇಂ
ಕೃತಿಗೆ).
3.
ರಾಹುಲ್ ಸಂಕೃತ್ಯಾಯನ ಪ್ರಶಸ್ತಿ (Non-Fiction):
ಜೆ. ಸುಶೀಲ್ (
ದುಃಖ್ ಕಿ ದುನಿಯಾ ಭೀತರ್ ಹೈ
ಕೃತಿಗೆ).
4.
ಮಹಾದೇವಿ ವರ್ಮಾ ಪ್ರಶಸ್ತಿ (ಅನುವಾದ):
ರಾಜಗೋಪಾಲ್ ಸಿಂಗ್ ವರ್ಮಾ.
➤ ವಿಶೇಷ ಗೌರವಗಳು:-
1.
ಕಾಳಿದಾಸ ಪ್ರಶಸ್ತಿ (ಭಾರತೀಯ ಭಾಷೆಗಳು):
ಕುರುಖ್ ಕವಿ
ಮಹದೇವ್ ಟೊಪ್ಪೊ
ಅವರಿಗೆ ಭಾರತೀಯ ಭಾಷೆಗಳ ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
2.
ವಿವೇಕಾನಂದ ಯುವ ಪ್ರಶಸ್ತಿ:
ಯುವ ಬರಹಗಾರ
ಪರಾಗ್ ಪವನ್
ಅವರಿಗೆ ಸಂದಿದೆ.
Take Quiz
Loading...