* 2025-26ರ ವೇಳೆಗೆ ಎಸ್-400 ವಾಯು ರಕ್ಷಣಾ ವ್ಯವಸ್ಥೆಯ ಉಳಿದ ಘಟಕಗಳನ್ನು ಭಾರತಕ್ಕೆ ವಹಿಸಲು ರಷ್ಯಾ ಬದ್ಧವಾಗಿದೆ ಎಂದು ಭಾರತದಲ್ಲಿನ ರಷ್ಯಾದ ಉಪರಾಯಭಾರಿ ರೋಮನ್ ಬಾಬುಷ್ಕಿನ್ ತಿಳಿಸಿದ್ದಾರೆ.* ‘ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಸಂಘರ್ಷದ ಸಂದರ್ಭದಲ್ಲಿ ಎಸ್-400 ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ನಮಗೆ ತಿಳಿದಿದೆ.* ರಷ್ಯಾ ಮತ್ತು ಭಾರತದ ನಡುವೆ ದೀರ್ಘಕಾಲದ ಸ್ನೇಹಪೂರ್ಣ ಸಹಕಾರವಿದೆ.* ಒಪ್ಪಂದದ ಪ್ರಕಾರ ಉಳಿದ ಎರಡು ಎಸ್-400 ಘಟಕಗಳು 2025-26ರ ಒಳಗೆ ಭಾರತಕ್ಕೆ ಬರುವವು’ ಎಂದು ಅವರು ಹೇಳಿದರು.* ಭಾರತ ಮತ್ತು ರಷ್ಯಾ ನಡುವೆ ಐದು ಎಸ್-400 ವ್ಯವಸ್ಥೆಗಳ ಖರೀದಿಗೆ ಒಪ್ಪಂದವಾಗಿದೆ. ಈ ಪೈಕಿ ಮೂರನ್ನು ರಷ್ಯಾ ಈಗಾಗಲೇ ಭಾರತಕ್ಕೆ ಒಪ್ಪಿಸಿದೆ.* ಆಪರೇಷನ್ ಸಿಂದೂರದ ವೇಳೆ, ಸುದರ್ಶನ ಚಕ್ರವೆಂಬ ಹೆಸರು ಪಡೆದ ಈ ರಷ್ಯಾ ನಿರ್ಮಿತ ಎಸ್-400 ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡಿತು.