* ಬೆಂಗಳೂರು ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ವಸ್ತು ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕರಾದ ಸಾಯಿ ಗೌತಮ್ ಗೋಪಾಲಕೃಷ್ಣನ್ ಅವರು ಖ್ಯಾತಿಯ Manohar Parrikar Yuva Scientist Award 2025 ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಯುವ ಸಂಶೋಧಕರಿಗಾಗಿ ರಚಿಸಲಾದ ಈ ಪ್ರಶಸ್ತಿ ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಯುವ ಪ್ರತಿಭೆಗಳು ನೀಡುತ್ತಿರುವ ಮಹತ್ವದ ಕೊಡುಗೆಗಳನ್ನು ಮಾನ್ಯಗೊಳಿಸಲು ನೀಡಲಾಗುತ್ತದೆ.* ವಿಶೇಷವಾಗಿ Computational Materials Science ಎಂಬ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರದಲ್ಲಿ ಸಾಯಿ ಗೌತಮ್ ಗೋಪಾಲಕೃಷ್ಣ ಅವರು ಸಲ್ಲಿಸಿರುವ ಪ್ರಮುಖ ಸಂಶೋಧನಾ ಕಾರ್ಯಗಳು ದೇಶಿ-ವಿದೇಶಿ ಮಟ್ಟದಲ್ಲಿ ವೈಜ್ಞಾನಿಕ ಸಮುದಾಯದ ಗಮನ ಸೆಳೆದಿವೆ.* ಗಣನೀಯ ಮಾದರೀಕರಣ (Computational Modelling), ವಸ್ತುಗಳ ಗುಣಲಕ್ಷಣಗಳ ಭವಿಷ್ಯಾಣಿಕೆ (Materials Prediction), ಶಕ್ತಿಸಂಗ್ರಹ ತಂತ್ರಜ್ಞಾನ, ಬ್ಯಾಟರಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ ಅನ್ವಯಿಕೆಗಳಿಗೆ ಅಗತ್ಯವಾದ ಹೊಸ ವಸ್ತುಗಳ ವಿನ್ಯಾಸದಲ್ಲಿ ಅವರು ಮಾಡುತ್ತಿರುವ ಸಂಶೋಧನೆಗಳು ಭವಿಷ್ಯದ ತಾಂತ್ರಿಕ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿವೆ.* ಈ ಪ್ರಶಸ್ತಿಯೊಂದಿಗೆ₹5 ಲಕ್ಷಗಳ ನಗದು ಬಹುಮಾನ ಹಾಗೂ ಅಧಿಕೃತ ಸ್ಮರಣ ಪತ್ರ (citation) ವನ್ನು ಒಳಗೊಂಡಿದೆ* ಅನಿಲ್ ಕಕೋಡ್ಕರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯು ತೀವ್ರ ಪರಿಶೀಲನೆಯ ನಂತರ ಗೋಪಾಲಕೃಷ್ಣನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ್ ನಲ್ಲಿ ನಡೆಯಲಿರುವ ಮನ್ ಹೋರ್ ಪಾರಿಕರ್ ವಿಜ್ಞಾನ ಮಹೋತ್ಸವದಲ್ಲಿ ನಡೆಯಲಿದೆ.