* 2024ರಲ್ಲಿ 53 ದೇಶಗಳ 295.3 ಮಿಲಿಯನ್ ಜನರು ತೀವ್ರ ಹಸಿವನ್ನು ಅನುಭವಿಸಿದ್ದಾರೆ. 2023ಕ್ಕೆ ಹೋಲಿಸಿದರೆ 13.7 ಮಿಲಿಯನ್ ಜನರ ಹೆಚ್ಚಳವಾಗಿದೆ. ನೈಜೀರಿಯಾ, ಸುಡಾನ್ ಮತ್ತು ಕಾಂಗೋ ದೇಶಗಳು ಮಾತ್ರವೇ ಶೇ.28ರಷ್ಟು ಜನರನ್ನು ಪ್ರತಿನಿಧಿಸುತ್ತವೆ.* ಅಫ್ಘಾನಿಸ್ತಾನ, ಇಥಿಯೋಪಿಯಾ, ನೈಜೀರಿಯಾ, ಕಾಂಗೋ, ಸಿರಿಯನ್ ಅರಬ್ ಗಣರಾಜ್ಯ, ಯೆಮೆನ್ ಮುಂತಾದ ರಾಷ್ಟ್ರಗಳು 2016ರಿಂದಲೇ ಈ ಪಟ್ಟಿಯಲ್ಲಿ ಇವೆ.* ಸಂಘರ್ಷ, ಹವಾಮಾನ ವೈಪರೀತ್ಯ ಮತ್ತು ಆರ್ಥಿಕ ಆಘಾತಗಳಿಂದ ಮಹಿಳೆಯರು ಮತ್ತು ಮಕ್ಕಳು ಗಂಭೀರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ತೀವ್ರ ಆಹಾರ ಅಭದ್ರತೆ ಸತತ ಆರನೇ ವರ್ಷವೂ ಹೆಚ್ಚಾಗಿದೆ.* ಯುದ್ಧಗಳಿಂದಾಗಿ ಗಾಜಾ ಮತ್ತು ದಕ್ಷಿಣ ಸುಡಾನ್ ಸೇರಿದಂತೆ 140 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಆರ್ಥಿಕ ಆಘಾತಗಳು 15 ದೇಶಗಳಲ್ಲಿ 59.4 ಮಿಲಿಯನ್ ಜನರನ್ನು ಬಾಧಿಸಿವೆ.* ಬರ, ಪ್ರವಾಹ, ಭೂಕುಸಿತ, ತಾಪಮಾನ ಏರಿಕೆಯಿಂದಾಗಿ 96 ಮಿಲಿಯನ್ ಜನರ ಜೀವನದ ಮೇಲೆ ಪರಿಣಾಮ ಬಿದ್ದಿದೆ. ಈ ಅಂಶಗಳು ಆಹಾರ ಅಭದ್ರತೆ ಮತ್ತು ಅಪೌಷ್ಟಿಕತೆಯನ್ನು ಹೆಚ್ಚಿಸುತ್ತಿವೆ.* ತೀವ್ರ ಹಸಿವಿನ ತಾಪ್ 10 ದೇಶಗಳು:ನೈಜೀರಿಯಾ (31.8 ಮಿ), ಸುಡಾನ್ (25.6 ಮಿ), ಬಾಂಗ್ಲಾದೇಶ (23.6 ಮಿ), ಇಥಿಯೋಪಿಯಾ (22 ಮಿ), ಯೆಮನ್ (16.7 ಮಿ), ಅಫ್ಘಾನಿಸ್ತಾನ (15.8 ಮಿ), ಮ್ಯಾನ್ಮಾರ್ (14.4 ಮಿ), ಪಾಕಿಸ್ತಾನ (11.8 ಮಿ), ಸಿರಿಯಾ (9.2 ಮಿ).* ಭಾರತ ತೀವ್ರ ಹಸಿವಿನ ಸೂಚಿಯಲ್ಲಿ 105ನೇ ಸ್ಥಾನದಲ್ಲಿದೆ. ಶೇ.13.7 ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಕ್ಕಳ ಮತ್ತು ತಾಯಂದಿರ ಆರೈಕೆಗೆ ಹೆಚ್ಚಿನ ಗಮನ ಅಗತ್ಯವಿದೆ ಎಂದು ವರದಿ ಸೂಚಿಸುತ್ತದೆ.