* 2006ರಲ್ಲಿ ಬೂಕರ್ ಪ್ರಶಸ್ತಿ ಗೆದ್ದ ಕಿರಣ್ ದೇಸಾಯಿ ಅವರು “ದಿ ಲೋನೆಲಿನೆಸ್ಸ್ ಆಫ್ ಸೋನಿಯಾ ಅಂಡ್ ಸನ್ನಿ” ಎಂಬ ತಮ್ಮ ಹೊಸ ಕಾದಂಬರಿಯಿಂದ 2025ರ ಬೂಕರ್ ಲಾಂಗ್ಲಿಸ್ಟ್ (ಪ್ರಾಥಮಿಕ ಪಟ್ಟಿ)ಗೆ ಆಯ್ಕೆಯಾಗಿದ್ದಾರೆ.* 667 ಪುಟಗಳ ಈ ಕೃತಿ ಪಟ್ಟಿಯಲ್ಲಿನ ಅತ್ಯಂತ ದೈರ್ಘ್ಯದ ಕಾದಂಬರಿಯಾಗಿದ್ದು, ಅಮೆರಿಕಾದಲ್ಲಿ ವಾಸವಿರುವ ಇಬ್ಬರು ಭಾರತೀಯ ಯುವಕರ ಬಾಳ ಪಯಣವನ್ನು ಚಿತ್ರಿಸುತ್ತದೆ.* ಈ ಕೃತಿಗೆ 20 ವರ್ಷಗಳ ಕಾಲ ಅವರು ಶ್ರಮಿಸಿದರೆಂದು ಬೂಕರ್ ಪ್ರತಿಷ್ಠಾನ ತಿಳಿಸಿದೆ. ಅವರು ಪುನಃ ಪ್ರಶಸ್ತಿ ಗೆದ್ದರೆ, ಇಬ್ಬರಿಗೂ ಎರಡು ಬಾರಿ ಬೂಕರ್ ಪ್ರಶಸ್ತಿ ದೊರಕಿದ ಐದನೇ ಲೇಖಕಿ ಎಂಬ ಗೌರಕ್ಕೆ ಪಾತ್ರರಾಗಲಿದ್ದಾರೆ. ಅವರ ತಾಯಿ ಅನಿತಾ ದೇಸಾಯಿ ಮೂರು ಬಾರಿ ಶಾರ್ಟ್ಲಿಸ್ಟ್ ಆದರೂ ಪ್ರಶಸ್ತಿ ಗೆಲ್ಲಲಿಲ್ಲ.* 2025ರ ಬೂಕರ್ ಲಾಂಗ್ಲಿಸ್ಟ್ನಲ್ಲಿ ಒಟ್ಟು 13 ಕೃತಿಗಳಿದ್ದು, ಸೆಪ್ಟೆಂಬರ್ 23ರಂದು ಆರು ಕೃತಿಗಳ ಅಂತಿಮ ಪಟ್ಟಿ ಲಂಡನ್ನಲ್ಲಿ ಘೋಷಣೆಯಾಗಲಿದೆ.* ನವೆಂಬರ್ 10ರಂದು ವಿಜೇತ ಕೃತಿಯನ್ನು ಪ್ರಕಟಿಸಲಾಗುತ್ತದೆ. ವಿಜೇತರಿಗೆ ₹58 ಲಕ್ಷ ನಗದು ಹಾಗೂ ಇತರ ಲೇಖಕರಿಗೂ ₹2.9 ಲಕ್ಷದೊಂದಿಗೆ ವಿಶೇಷ ಪ್ರತಿಗಳನ್ನು ನೀಡಲಾಗುತ್ತದೆ.* ಈ ವರ್ಷದ ಪಟ್ಟಿಯಲ್ಲಿರುವ ಕೃತಿಗಳು ಹಲವಾರು ದೇಶಗಳಿಂದ ಆಯ್ಕೆಯಾಗಿದ್ದು, ವೈವಿಧ್ಯಮಯ ಕಥಾನಕಗಳನ್ನು ಒಳಗೊಂಡಿವೆ.* 153 ಕೃತಿಗಳ ಪೈಕಿ ಆಯ್ಕೆಗೊಂಡ ಈ 13 ಕಾದಂಬರಿಗಳು ಭಾಷಾ ವೈವಿಧ್ಯ, ಪ್ರಾಯೋಗಿಕತೆ ಹಾಗೂ ವೈಯಕ್ತಿಕ ಮತ್ತು ಜಾತ್ಯಾತೀತ ದೃಷ್ಟಿಕೋನಗಳಿಂದ ಗಮನಸೆಳೆದಿವೆ.