* ಬಸವ ಪರಿಷತ್ ವತಿಯಿಂದ ನೀಡುವ 2025ರ ‘ಬಸವ ಪುರಸ್ಕಾರ’ಕ್ಕೆ ಐಎಸ್ಆರ್ಒ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.* ಪರಿಸರ ಕ್ಷೇತ್ರದಿಂದ ಅಲ್ಮಿತ್ರಾ ಪಟೇಲ್, ನ್ಯಾಯಾಂಗ ಕ್ಷೇತ್ರದಿಂದ ರವಿವರ್ಮ ಕುಮಾರ್, ಶಿಕ್ಷಣ ಮತ್ತು ಸಹಕಾರ ಕ್ಷೇತ್ರದಿಂದ ಎಸ್.ಆರ್. ಪಾಟೀಲ, ಮಹಿಳಾ ಸಬಲೀಕರಣದಲ್ಲಿ ಎಂ.ಎನ್. ರಾಜೇಂದ್ರ ಕುಮಾರ್, ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಿಂದ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.* ಉದ್ಯಮ ಮತ್ತು ಸಮಾಜ ಸೇವೆಯಲ್ಲಿ ಮಾನಂದಿ ರಮೇಶ್, ಬಸವರಾಜ ಎಸ್. ದೇಶಮುಖ, ವಿ.ಎಸ್.ವಿ. ಪ್ರಸಾದ್, ಎಸ್.ಪಿ. ದಯಾನಂದ್, ಬಸವರಾಜ ಧನ್ನೂರ, ಶಾಮನೂರು ಎಸ್. ಗಣೇಶ್, ಡಾ. ನಾಗರಾಜಯ್ಯ ಎನ್., ರವಿಕುಮಾರಸ್ವಾಮಿ ಹಿರೇಮಠ ಹಾಗೂ ಬಸವರಾಜ ಯಲಿಗಾರ ಪುರಸ್ಕೃತರಾಗಿದ್ದಾರೆ.* ಅಗಸ್ಟ್ 9ರಂದು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ.