* ಮಹತ್ವದ ಬೆಳವಣಿಗೆಯಲ್ಲಿ ಮುಂದಿನ ವರ್ಷದ (2025) ಆರಂಭದಲ್ಲಿ ರಾಷ್ಟೀಯ ಜನಗಣತಿ ಕೈಗೊಳ್ಳಲು ಕೇಂದ್ರ ಸರಕಾರ ಉದ್ದೇಶಿಸಿದ್ದು, 2026ರಲ್ಲಿ ಪೂರ್ಣಗೊಳಿಸುವ ಗುರಿ ಹೊಂದಿದೆ.* ಹತ್ತು ವರ್ಷಗಳಿಗೊಮ್ಮೆ ನಡೆಯ ಬೇಕಾದ ಜನಗಣತಿಯು 2025ರ ಆರಂಭದಲ್ಲಿ ಶುರುವಾಗಲಿದೆ. ಜನಗಣತಿಯಿಂದ ಲಭ್ಯವಾಗಲಿರುವ ದತ್ತಾಂಶಗಳು 2026 ರೊಳಗೆ ಬಹಿರಂಗ ಪಡಿಸಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಾಮಾನ್ಯ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಕೈಗೊಳ್ಳುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.* ದೇಶದ ಜನಸಂಖ್ಯೆಯನ್ನು 1951 ರಿಂದ ಪ್ರತಿ 10 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ, ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ಜನಗಣತಿ ಕಾರ್ಯವನ್ನು ಕೈಗೊಳ್ಳಲಾಗಲಿಲ್ಲ. ಮುಂದಿನ ವೇಳಾಪಟ್ಟಿಯ ಬಗ್ಗೆ ಯಾವುದೇ ಘೋಷಣೆ ಮಾಡಲಾಗಿಲ್ಲ.* ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯು ಗಣತಿ ಕಾರ್ಯದ ಸಮಯದಲ್ಲಿ ನಾಗರಿಕರಿಗೆ ಕೇಳಲು 31 ಪ್ರಶ್ನೆಗಳನ್ನು ಸಿದ್ಧಪಡಿಸಿದೆ.* ಈ ಪ್ರಶ್ನೆಗಳು ಹಿಂದಿನ ಜನಗಣತಿಯಲ್ಲಿ ಕೇಳಿದಂತೆ ಕುಟುಂಬದ ಸದಸ್ಯರ ಸಂಖ್ಯೆ, ಕುಟುಂಬದ ಯಜಮಾನ (ಪುರುಷ ಅಥವಾ ಮಹಿಳೆ), ಕುಟುಂಬಸ್ಥರ ಉದ್ಯೋಗ, ಮನೆ, ಮನೆಯಲ್ಲಿರುವ ಕೊಠಡಿಗಳ ಸಂಖ್ಯೆ, ವಿವಾಹಿತರ ಸಂಖ್ಯೆ, ಇತರೆ ಸದಸ್ಯರ ಸಂಖ್ಯೆಯನ್ನು ಪ್ರಶ್ನೆ ಮಾಲಿಕೆ ಹೊಂದಿರಲಿದೆ.*  ಇಂಟರ್‌ನೆಟ್ ಸಂಪರ್ಕ, ಮೊಬೈಲ್ ಫೋನ್, ಕಾರು, ದ್ವಿಚಕ್ರ ವಾಹನಗಳ ಸಂಖ್ಯೆಗಳ ಮಾಹಿತಿಯನ್ನು ಗಣತಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಮನೆಯ ನೀರಿನ ಸಂಪರ್ಕ, ವಿದ್ಯುತ್ ಮೂಲ, ಶೌಚಾಲಯದ ವಿಧಾನ, ಸ್ನಾನಗೃಹಗಳು, ಎಲ್‌ಪಿಜಿ ಸಂಪರ್ಕ, ಟಿವಿ, ರೆಡಿಯೊ ಮೊದಲಾದ ವಸ್ತುಗಳ ಮಾಹಿತಿಯನ್ನು ಅಳವಡಿಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.* ಜನಗಣತಿ ಅಂಕಿ ಸಂಖ್ಯೆ ಆಧರಿಸಿ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಗೆ ನಿರ್ಧರಿಸಿದೆ ಕೇಂದ್ರ ಎನ್ನಲಾಗಿದೆ. 2026ರಕ್ಕೆ ಆರಂಭವಾಗಲಿರುವ ಮರು ವಿಂಗಡಣೆ ಕಾರ್ಯ 2028ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.