* 2025ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ರಾಷ್ಟ್ರಪತಿ ಭವನದಲ್ಲಿ ಸೋಮವಾರ(ಏಪ್ರಿಲ್ 28) ಸಂಜೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು.* ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದ 71 ಮಂದಿ ಗಣ್ಯರು ಈ ಬಾರಿ ಗೌರವಿಸಲ್ಪಟ್ಟಿದ್ದಾರೆ. ಇವರಲ್ಲಿ ನಾಲ್ವರಿಗೆ ಪದ್ಮವಿಭೂಷಣ, 10 ಮಂದಿಗೆ ಪದ್ಮಭೂಷಣ ಮತ್ತು 57 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.* 2025ರ ಜನವರಿ 25ರಂದು, 76ನೇ ಗಣರಾಜ್ಯೋತ್ಸವದ ಮುನ್ನಾದಿನದಂದು, ಒಟ್ಟಾರೆಯಾಗಿ 139 ಜನರ ಹೆಸರುಗಳನ್ನು ಪದ್ಮ ಪ್ರಶಸ್ತಿಗಳಿಗೆ ಘೋಷಿಸಲಾಗಿತ್ತು. ಈ ಪೈಕಿ ಈಗ 71 ಮಂದಿಗೆ ಪ್ರಶಸ್ತಿ ಪ್ರದಾನಗೊಂಡಿದೆ.ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು:1) ಒಸಾಮು ಸುಜುಕಿ (ಮರಣೋತ್ತರ)- ಸುಜುಕಿ ಮೋಟಾರ್ ಕಾರ್ಪೊರೇಷನ್ನ ಮಾಜಿ ಮುಖ್ಯಸ್ಥ.2) ಲಕ್ಷ್ಮಿನಾರಾಯಣ ಸುಬ್ರಮಣಿಯಂ- ಖ್ಯಾತ ಪಿಟೀಲು ವಾದಕ.3) ಡಿ. ನಾಗೇಶ್ವರ ರೆಡ್ಡಿ- ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿಯ ಅಧ್ಯಕ್ಷ.4) ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) ಮಲಯಾಳಂ ಲೇಖಕ ಮತ್ತು ಚಲನಚಿತ್ರ ನಿರ್ಮಾಪಕ.ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು:1) ತೆಲುಗು ನಟ ನಂದಮೂರಿ ಬಾಲಕೃಷ್ಣ– ಕಲೆ2) ವಿನೋದ್ ಧಾಮ್ –ವಿಜ್ಞಾನ ಮತ್ತು ಎಂಜಿನಿಯರಿಂಗ್3) ಸುಶೀಲ್ ಕುಮಾರ್ ಮೋದಿ (ಮರಣೋತ್ತರ) –ಸಾರ್ವಜನಿಕ ಸೇವೆ4) ಹಿರಿಯ ನಟ ಶೇಖರ್ ಕಪೂರ್– ಕಲೆ5) ತಮಿಳು ನಟ ಎಸ್. ಅಜಿತ್ ಕುಮಾರ್– ಕಲೆ6) ಪಂಕಜ್ ಪಟೇಲ್– ವ್ಯಾಪಾರ ಮತ್ತು ಕೈಗಾರಿಕೆ7) ಡಾ. ಜೋಸ್ ಚಾಕೊ ಪೆರಿಯಪ್ಪುರಂ –ವೈದ್ಯಕೀಯ ಕ್ಷೇತ್ರ8) ಅನಂತರಾಮಯ್ಯ ಸೂರ್ಯ ಪ್ರಕಾಶ್ –ಪತ್ರಿಕೋದ್ಯಮ9) ಹಾಕಿ ದಿಗ್ಗಜ ಪಿ.ಆರ್ ಶ್ರೀಜೇಶ್– ಕ್ರೀಡಾ ಕ್ಷೇತ್ರ10) ಗಾಯಕ ಪಂಕಜ್ ಉದಾಸ್ (ಮರಣೋತ್ತರ)– ಕಲೆ* ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ 57 ಮಂದಿಯಲ್ಲಿ, ಕರ್ನಾಟಕದ ಕೊಪ್ಪಳದ ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ, ಡಾ. ವಿಜಯಲಕ್ಷ್ಮಿ ದೇಶಮಾನೆ, ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಎಸ್ಬಿಐ ಮಾಜಿ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ, ಲೇಖಕ ಸ್ಟೀಫನ್ ನ್ಯಾಪ್, ವಾದಕ ರೋನು ಮಜುಂದಾರ್, ಶಾಸ್ತ್ರೀಯ ಗಾಯಕರಾದ ಡಾ. ಕೆ. ಓಮನ್ಕುಟ್ಟಿ ಅಮ್ಮ, ವೇದ ವಿದ್ವಾಂಸ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಹಾಗೂ ಯೋಗ ಪ್ರಚಾರಕರಾದ ಶೈಖಾ ಅಲಿ ಜಾಬರ್ ಅಲ್-ಸಬಾ ಮೊದಲಾದವರನ್ನು ಪ್ರಮುಖರು.