* ವಿಶ್ವಸಂಸ್ಥೆಯು 2025ರ ವರ್ಷವನ್ನು 'ಅಂತರರಾಷ್ಟ್ರೀಯ ಕ್ವಾಂಟಮ್ ವಿಜ್ಞಾನ ಮತ್ತು ತಂತ್ರಜ್ಞಾನ ವರ್ಷ' ಎಂದು ಗೊತ್ತುಪಡಿಸಿದೆ.* ಕ್ವಾಂಟಮ್ ಸಿದ್ಧಾಂತಕ್ಕೆ 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸಲು ವರ್ಷವಿಡೀ ಕಾರ್ಯಕ್ರಮಗಳು ನಡೆಯಲಿವೆ. ಉದ್ಘಾಟನೆ ಫೆ.4ರಂದು ಪ್ಯಾರಿಸ್ನಲ್ಲಿ ಆರಂಭಗೊಂಡಿದೆ.* ಕ್ವಾಂಟಂ ವಿಜ್ಞಾನವು ವಸ್ತು ಮತ್ತು ಶಕ್ತಿಯನ್ನ ಅತ್ಯಂತ ಮೂಲಭೂತ ಸ್ತರದಲ್ಲಿ ಅಧ್ಯಯನ ಮಾಡುವ ಶಾಸ್ತ್ರವಾಗಿದೆ, ಇದರಲ್ಲಿ ಪರಮಾಣುಗಳನ್ನ ಅತ್ಯಂತ ಸಣ್ಣ ಕಣಗಳಾಗಿ ಪರಿಗಣಿಸಲಾಗುತ್ತದೆ. ಅದರಲ್ಲಿ ಎಲೆಕ್ಟ್ರಾನ್, ಫೋಟಾನ್ ಮುಂತಾದ ಸೂಕ್ಷ್ಮ ವಿಭಾಗವಿದೆ.* ಕ್ವಾಂಟಂ ವಿಜ್ಞಾನವು ಪರಿಸರ ವ್ಯವಸ್ಥೆ ಹಾಗೂ ನಡವಳಿಕೆಯನ್ನು ಅಧ್ಯಯನ ಮಾಡುತ್ತದೆ ಮತ್ತು ಕಂಪ್ಯೂಟರ್, ಹಣಕಾಸು, ಆರೋಗ್ಯ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.* ಮೇ 2023 ರಲ್ಲಿ ಮೆಕ್ಸಿಕೋ ನೇತೃತ್ವದ ನಿರ್ಣಯದಿಂದ ಪ್ರಾರಂಭವಾದ ಈ ಉಪಕ್ರಮವನ್ನು 60 ಕ್ಕೂ ಹೆಚ್ಚು ದೇಶಗಳು ಬೆಂಬಲಿಸಿದವು. ನವೆಂಬರ್ 2023 ರಲ್ಲಿ ಯುನೆಸ್ಕೋ ಅಂಗೀಕರಿಸಿದ ನಿರ್ಣಯವನ್ನು, ಮೇ 2024 ರಲ್ಲಿ ಘಾನಾ ಯುಎನ್ ಜನರಲ್ ಅಸೆಂಬ್ಲಿಗೆ ಪ್ರಸ್ತುತಪಡಿಸಿತು. 70 ಕ್ಕೂ ಹೆಚ್ಚು ದೇಶಗಳ ಬೆಂಬಲದೊಂದಿಗೆ, ಜೂನ್ 7, 2024 ರಂದು ಅಧಿಕೃತ ಘೋಷಣೆ ಮಾಡಲಾಯಿತು.* ಈ ಉತ್ಸವ ವರ್ನರ್ ಹೈಸೆನ್ಬರ್ಗ್ ಅವರ ಕ್ವಾಂಟಮ್ ಮೆಕ್ಯಾನಿಕ್ಸ್ ಕುರಿತ ಶತಮಾನಪೂರ್ತಿ ಮೂಲ ಪ್ರಬಂಧವನ್ನು ಸ್ಮರಿಸಲು ಹಾಗೂ ಅವರ ನೊಬೆಲ್ ಪ್ರಶಸ್ತಿಗೆ ಕಾರಣವಾದ ಅನಿಶ್ಚಿತತಾ ತತ್ವವನ್ನು ಗೌರವಿಸಲು ಆಚರಿಸಲಾಗುತ್ತಿದೆ.* ಕ್ವಾಂಟಮ್ ಕಂಪ್ಯೂಟಿಂಗ್ ಉಪಯೋಗಗಳು:• ಆರೋಗ್ಯ ಕ್ಷೇತ್ರ: ಔಷಧ ಪರಿಣಾಮಗಳ ಅಂದಾಜು, ಔಷಧ ಅಭಿವೃದ್ಧಿಯಲ್ಲಿ ಸಹಾಯ, ಲೇಸರ್ ಚಿಕಿತ್ಸೆ, ಎಂಆರ್ಐ ಸ್ಕ್ಯಾನಿಂಗ್ನಲ್ಲಿ ಉಪಯೋಗ.• ಹಣಕಾಸು: ಮಾರುಕಟ್ಟೆ ಅಂದಾಜು ಮಾಡುವ ಕಂಪ್ಯುಟೇಷನಲ್ ಮಾಡೆಲ್ಗಳ ಮೂಲಕ ತ್ವರಿತ ಮಾಹಿತಿ ವಿಶ್ಲೇಷಣೆ.• ಸೈಬರ್ ಸೆಕ್ಯುರಿಟಿ: ಅಬೇಧ್ಯ ಸುರಕ್ಷತೆಯನ್ನು ಕ್ವಾಂಟಮ್ ಕಂಪ್ಯೂಟರ್ಗಳಿಂದ ಸಾಧಿಸಬಹುದು.• ಕ್ರಿಪ್ಟೋ ಕರೆನ್ಸಿ: ಬಿಟ್ ಕಾಯಿನ್, ಎಥಿರಿಯಂ ಸಂಗ್ರಹದಲ್ಲಿ ಲಾಭ; ಶೇ.25 ಕ್ರಿಪ್ಟೋ ಕರೆನ್ಸಿಗಳು ಸುಲಭ ಕಡಿಯುವ ರೀತಿಯಲ್ಲಿ ಸಂಗ್ರಹ.• ಕೃತಕ ಬುದ್ಧಿಮತ್ತೆ: ಭಾರಿ ಮಾಹಿತಿಯ ವಿಶ್ಲೇಷಣೆ ಮತ್ತು ಸಂಕೀರ್ಣ ಮಾಡೆಲ್ಗಳ ಅನುಕರಣೆಯಲ್ಲಿ ನೆರವು.• ಉತ್ಪಾದನೆ ಮತ್ತು ವಿನ್ಯಾಸ: ಏರ್ಬಸ್ ಸೇರಿದಂತೆ ಕಂಪನಿಗಳು ಕ್ವಾಂಟಮ್ ತಂತ್ರಜ್ಞಾನದ ಮೂಲಕ ವಿನ್ಯಾಸದ ವೇಗ ಹೆಚ್ಚಿಸುತ್ತಿವೆ; ಕೃಷಿ, ಭದ್ರತೆ, ಸಾರಿಗೆ ಕ್ಷೇತ್ರಗಳಲ್ಲಿ ಬಳಕೆ.* ಈ ಘೋಷಣೆಗೆ ಹಲವಾರು ಪ್ರತಿಷ್ಠಿತ ವೈಜ್ಞಾನಿಕ ಸಂಘಗಳ ಅನುಮೋದನೆ ಇದೆ, ಅವುಗಳಲ್ಲಿ ಅಂತಾರಾಷ್ಟ್ರೀಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಸ್ಫಟಿಕಶಾಸ್ತ್ರ, ಮತ್ತು ವಿಜ್ಞಾನ ಇತಿಹಾಸ ತತ್ವಶಾಸ್ತ್ರ ಒಕ್ಕೂಟಗಳು ಸೇರಿವೆ.