* 2025ರಲ್ಲಿ ನಡೆಯಲಿರುವ ತಂತ್ರಜ್ಞಾನ ಶೃಂಗಸಭೆಗೆ 60 ದೇಶಗಳ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಐಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್ ತಿಳಿಸಿದ್ದಾರೆ. 2024ರಲ್ಲಿ 45 ದೇಶಗಳು ಭಾಗವಹಿಸಿದ್ದರೆ, ಈ ಬಾರಿ ಆ ಸಂಖ್ಯೆ ಹೆಚ್ಚಳಗೊಂಡಿದೆ.* ಬೆಂಗಳೂರು ಹೊರವಲಯದಲ್ಲಿ ಉದಯೋನ್ಮುಖ ತಂತ್ರಜ್ಞಾನ ಸಮುಚ್ಚಯಗಳ ಸ್ಥಾಪನೆಗೆ ನೆರವಾಗುವಂತೆ ಮೂಲಸೌಕರ್ಯ, ಪ್ರತಿಭೆ ಹಾಗೂ ಮಾರುಕಟ್ಟೆ ಲಭ್ಯತೆಗೆ ಉತ್ತೇಜನ ನೀಡಲಾಗುತ್ತಿದೆ. ಕ್ರಿಯಾತ್ಮಕ ಪರಿಸರ ವ್ಯವಸ್ಥೆ ರೂಪಿಸಲಾಗುತ್ತಿದೆ.* ಯುಎಸ್–ಇಂಡಿಯಾ ಬಿಸಿನೆಸ್ ಕೌನ್ಸಿಲ್ ಜತೆ ಕರ್ನಾಟಕ ತನ್ನ ಪಾಲುದಾರಿಕೆಯನ್ನು ಗಟ್ಟಿಮಾಡಿದೆ. ಇದರಿಂದ ರಾಜ್ಯದ ಉದ್ಯಮಗಳಿಗೆ ಅಂತಾರಾಷ್ಟ್ರೀಯ ಸಂಪರ್ಕ ಸುಗಮವಾಗಲಿದೆ.* ಈ ಶೃಂಗಸಭೆ ವಿಶ್ವಮಟ್ಟದ ಮೂಲಸೌಕರ್ಯ, ವಿಶಾಲ ಸಭಾಂಗಣಗಳು ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಜರುಗಲಿದೆ. 20 ಸಾವಿರ ಸ್ಟಾರ್ಟಪ್ ಸಂಸ್ಥಾಪಕರು, 1000 ಹೂಡಿಕೆದಾರರು, 15 ಸಾವಿರ ಉದ್ಯಮ ಪ್ರತಿನಿಧಿಗಳು ಮತ್ತು ಸುಮಾರು 1 ಲಕ್ಷ ಜನರು ಭಾಗವಹಿಸಲಿದ್ದಾರೆ.* ಈ ಸಭೆಯಲ್ಲಿ ಕೆಐಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಶರಣಪ್ಪ, ಉಪ ಕಾರ್ಯದರ್ಶಿ ದಲ್ಜೀತ್ ಕುಮಾರ್ ಹಾಗೂ 20ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.