* 13 ವರ್ಷದ ಭಾರತೀಯ ಅಮೆರಿಕನ್ ಫೈಜಾನ್ ಝಾಕಿ ಅವರು ಪ್ರತಿಷ್ಠಿತ 2025ರ ‘ಸ್ಕ್ರಿಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಚಾಂಪಿಯನ್ಷಿಪ್’ನಲ್ಲಿ ವಿಜೇತರಾದರು.* ಹಿಂದಿನ ಬಾರಿ ಫೈಜಾನ್ ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದರು. ಅವರ ತಂದೆ ದಕ್ಷಿಣ ಭಾರತದಿಂದ ಅಮೆರಿಕಕ್ಕೆ ವಲಸೆ ಬಂದವರು.* ‘ಬಾಲ್ಯದಿಂದಲೇ ಪದಗಳ ಬಗ್ಗೆ ಆಸಕ್ತಿ ಹೊಂದಿದ್ದ ಫೈಜಾನ್, ನಿತ್ಯ ಅಭ್ಯಾಸದಿಂದ ನಿಘಂಟಿಯ ಬಹುಪಾಲು ಪದಗಳನ್ನು ಅರಿತುಕೊಂಡಿದ್ದಾರೆ. ಇಷ್ಟು ದೂರ ಬಂದಿರುವುದು ಎಲ್ಲರಿಗೂ ಹೆಮ್ಮೆ ತಂದಿದೆ’ ಎಂದು ತಂದೆ ಝಾಕಿ ಅನ್ವರ್ ಅಭಿಪ್ರಾಯಪಟ್ಟರು.* ಹಿಂದಿನ 36 ವಿಜೇತರಲ್ಲಿ 30 ಮಂದಿ ಭಾರತೀಯ ಮೂಲದ ಅಮೆರಿಕನ್ನರು ಇದ್ದಾರೆ.