* ಮುಂದಿನ ವರ್ಷದಿಂದ ಪಿಎಫ್ ಹಣವನ್ನು ATM ಮೂಲಕವೇ ಸುಲಭವಾಗಿ ಹಿಂಪಡೆಯುವ ಸೌಲಭ್ಯವನ್ನು ಪರಿಚಯಿಸುವುದಾಗಿ ಕೇಂದ್ರ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಸುಮಿತಾ ದಾವ್ರಾ ಘೋಷಿಸಿದ್ದಾರೆ.* ಚಂದಾದಾರರು ಈಗ ಹಣ ಹಿಂಪಡೆಯಲು ಇಪಿಎಫ್ಓ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈ ಪ್ರಕ್ರಿಯೆಯು ಪೂರ್ಣಗೊಳಿಸಲು ೭ ರಿಂದ ೮ ದಿನಗಳ ನಂತರ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.* ಈ ಹೊಸ ವ್ಯವಸ್ಥೆಯಡಿ ಕ್ಲೇಮ್ ಗೆ ಅನುಮೋದನೆ ದೊರೆತ ನಂತರ ಪಿಎಫ್ ಹಣವನ್ನು ಫಲಾನುಭವಿಗಳು ಎಟಿಎಂನಲ್ಲಿ ಪಡೆಯಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ಎಟಿಎಂ ವಿತರಿಸಲಾಗುವುದು. ಈ ಅನುಮೋದನೆಯಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಿದೆ.* PF ಖಾತೆದಾರನ ಮರಣದ ಸಂದರ್ಭದಲ್ಲಿ ನಾಮಿನಿ (ಫಲಾನುಭವಿ) ನೇರವಾಗಿ ATM ನಿಂದ ಹಿಂಪಡೆಯಬಹುದು. ಆದರೆ ಫಲಾನುಭವಿಯ ಬ್ಯಾಂಕ್ ಖಾತೆಯನ್ನು ಮೃತ ಇಪಿಎಫ್ಒ ಖಾತೆದಾರರ ಖಾತೆಗೆ ಲಿಂಕ್ ಮಾಡಬೇಕು. ಆದರೆ, ಈ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.* ಚಂದಾದಾರರಿಗೆ ತ್ವರಿತ ಮತ್ತು ಸುಲಭವಾಗಿ ಸೌಲಭ್ಯ ಕಲ್ಪಿಸುವುದಕ್ಕಾಗಿ ಮಾಹಿತಿ ಸುಧಾರಣೆಗೆ ಪಿಎಫ್ಓ ಪ್ರಾಮ್ಯುಖತೆ ನೀಡಿದೆ.