* ಯುನೈಟೆಡ್ ಕಿಂಗ್ಡಮ್ನ ಲಿವರ್ಪೂಲ್ನಲ್ಲಿ ನಡೆದ 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಜೈಸ್ಮಿನ್ ಲಂಬೋರಿಯಾ 57 ಕೆಜಿ ವಿಭಾಗ ಮತ್ತು ಮೀನಾಕ್ಷಿ ಹೂಡಾ 48 ಕೆಜಿ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಕೊಂಡಿದ್ದಾರೆ.* ಪ್ಯಾರಿಸ್ ಒಲಿಂಪಿಕ ಕೂಟದ ಮಹಿಳೆಯರ 57ಕೆಜಿ ವಿಭಾಗದ ಬೆಳ್ಳಿ ಪದಕ ವಿಜೇತೆ ಪೋಲೆಂಡ್ನ ಜೂಲಿಯಾ ಸ್ಜೆರೆಮೆಟಾ ಅವರನ್ನು ಜೈಸ್ಮಿನ್ 4-1 ಸ್ಪ್ಲಿಟ್ ಡಿಸಿಷನ್ ಗಳಿಂದ ಸೋಲಿಸುವ ಮೂಲಕ ಚಿನ್ನದ ಪಾದಕವನ್ನ ಗೆದ್ದುಕೊಂಡಿದ್ದಾರೆ.* 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನ ಮಹಿಳಾ ವಿಭಾಗ : 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಬಾಕ್ಸರ್ಗಳು ಶ್ಲಾಘನೀಯ ಪ್ರದರ್ಶನ ನೀಡಿ, ಮೂರು ಪದಕಗಳನ್ನು ಗೆದ್ದರು- ಜೈಸ್ಮಿನ್ ಲಂಬೋರಿಯಾ - ಚಿನ್ನ, 57 ಕೆಜಿ- ಮೀನಾಕ್ಷಿ ಹೂಡಾ - ಚಿನ್ನ, 48 ಕೆಜಿ- ನೂಪುರ್ ಶೆರಾನ್ - ಬೆಳ್ಳಿ, 80+ ಕೆಜಿ- ಪೂಜಾ ರಾಣಿ - ಕಂಚು, ಮಧ್ಯಮ ತೂಕ ವಿಭಾಗ* ಮೀನಾಕ್ಷಿ ಹೂಡಾ : 2025 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ನ 48 ಕೆ.ಜಿ ವಿಭಾಗದ ಫೈನಲ್ನಲ್ಲಿ ಮೀನಾಕ್ಷಿ ಅವರು ಕಜಾಕಸ್ತಾನದ ನಾಝೀಂ ಕೈಝಬೆ ವಿರುದ್ಧ ಜಯಭೇರಿ ಬಾರಿಸಿದರು. ನಾಝೀಂ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದಿದ್ದರು.* ನೂಪುರ್ ಶಿಯೋರನ್ ಅವರ ಫೈನಲ್ : 80+ ಕೆಜಿ ವಿಭಾಗದ ಫೈನಲ್ನಲ್ಲಿ ನೂಪುರ್ ಶಿಯೋರನ್ ಅದ್ಭುತ ಪ್ರದರ್ಶನ ನೀಡಿ, ಪೋಲೆಂಡ್ನ ಅಗಾಟಾ ಕಾಜ್ಮಾರ್ಸ್ಕಾ ವಿರುದ್ಧ 3-2 ಅಂತರದಲ್ಲಿ ಸೋತು ಬೆಳ್ಳಿ ಪದಕ ಗೆದ್ದರು. ಈ ಸೋಲಿನ ಹೊರತಾಗಿಯೂ, ಅವರ ಪ್ರಬಲ ಪ್ರದರ್ಶನವು ಹೆವಿವೇಯ್ಟ್ ವಿಭಾಗದಲ್ಲಿ ಭಾರತದ ಶಕ್ತಿಯನ್ನು ಎತ್ತಿ ತೋರಿಸಿತು.* ಪೂಜಾ ರಾಣಿಯವರ ಕಂಚು : ಅನುಭವಿ ಬಾಕ್ಸರ್ ಮತ್ತು ಒಲಿಂಪಿಯನ್ ಪೂಜಾ ರಾಣಿ ಕಂಚಿನ ಪದಕದೊಂದಿಗೆ ಭಾರತದ ಪದಕ ಪಟ್ಟಿಯಲ್ಲಿ ಸ್ಥಾನ ಪಡೆದರು, ಕ್ರೀಡೆಯ ಅತ್ಯುನ್ನತ ಮಟ್ಟದಲ್ಲಿ ಸ್ಥಿರತೆ ಮತ್ತು ಅನುಭವವನ್ನು ಪ್ರದರ್ಶಿಸಿದರು.* ಪ್ರಮುಖ ಅಂಶಗಳು : - ಈವೆಂಟ್: ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ 2025, ಲಿವರ್ಪೂಲ್, ಯುಕೆ- ಚಿನ್ನದ ಪದಕ ವಿಜೇತೆ: ಜೈಸ್ಮಿನ್ ಲಂಬೋರಿಯಾ (57 ಕೆಜಿ) - ಜೂಲಿಯಾ ಸ್ಜೆರೆಮೆಟಾ (ಪೋಲೆಂಡ್) ಅವರನ್ನು 4-1 ಅಂತರದಿಂದ ಸೋಲಿಸಿದರು.- ಚಿನ್ನದ ಪದಕ ವಿಜೇತೆ: - ಮೀನಾಕ್ಷಿ ಹೂಡಾ (48 ಕೆಜಿ) - ನಾಝೀಂ ಕೈಝಬೆ ಅವರನ್ನು ಸೋಲಿಸಿದರು.- ಬೆಳ್ಳಿ ಪದಕ ವಿಜೇತ: ನೂಪುರ್ ಶೆಯೊರಾನ್ (80+ ಕೆಜಿ) - ಅಗಾಟಾ ಕಾಜ್ಮಾರ್ಸ್ಕಾ (ಪೋಲೆಂಡ್) ಗೆ ಸೋತರು.- ಕಂಚಿನ ಪದಕ ವಿಜೇತೆ: ಪೂಜಾ ರಾಣಿ- 2024 ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆರಂಭಿಕ ಸೋಲಿನ ನಂತರ ಜೈಸ್ಮಿನ್ ಗೆಲುವು ಸಾಧಿಸಿದ್ದಾರೆ.- ಭಾರತ 4 ಪದಕಗಳನ್ನು ಗೆದ್ದಿದೆ (ಎಲ್ಲವೂ ಮಹಿಳೆಯರದ್ದೇ); ಪುರುಷರ ವಿಭಾಗದಲ್ಲಿ ಯಾವುದೇ ಪದಕಗಳಿಲ್ಲ.