* 2025ನೇ ಸಾಲಿನ ಕ್ಯೂಎಸ್ (QS) ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು, ಅಮೆರಿಕದ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಸತತ 13ನೇ ವರ್ಷ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜು ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ ಎರಡನೇ ಸ್ಥಾನ ಗಳಿಸಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದರೆ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಐದನೇ ಸ್ಥಾನ ಪಡೆದಿದೆ. * ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ರ‍್ಯಾಂಕಿಂಗ್ಸ್ ಎಂಬುದು ಕ್ವಾಕ್ವೆರೆಲ್ಲಿ ಸೈಮಂಡ್ಸ್ (QS) ನಡೆಸುವ ವಿಶ್ವವಿದ್ಯಾನಿಲಯ ಶ್ರೇಯಾಂಕಗಳ ವಾರ್ಷಿಕ ಪ್ರಕಟಣೆಯಾಗಿದ್ದು, ಶೈಕ್ಷಣಿಕ ಖ್ಯಾತಿ, ಉದ್ಯೋಗದಾತರ ಖ್ಯಾತಿ, ಅಧ್ಯಾಪಕರು/ವಿದ್ಯಾರ್ಥಿ ಅನುಪಾತ, ಪ್ರತಿ ಅಧ್ಯಾಪಕರಿಗೆ ಉಲ್ಲೇಖಗಳು, ಅಂತರರಾಷ್ಟ್ರೀಯ ಅಧ್ಯಾಪಕರು ಮತ್ತು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಂತಹ ಅಂಶಗಳ ಆಧಾರದ ಮೇಲೆ ವಿಶ್ವಾದ್ಯಂತ ವಿಶ್ವವಿದ್ಯಾಲಯಗಳನ್ನು ನಿರ್ಣಯಿಸುತ್ತದೆ.* ಈ ರ‍್ಯಾಂಕಿಂಗ್ ಪಟ್ಟಿಯು 105 ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ 1,500ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಒಳಗೊಂಡಿವೆ. ಈ ಪಟ್ಟಿಯಲ್ಲಿ 197 ರ‍್ಯಾಂಕಿಂಗ್ ಸಂಸ್ಥೆಗಳನ್ನು ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಮೊದಲ ಸ್ಥಾನದಲ್ಲಿದ್ದರೆ, ನಂತರ ಯುನೈಟೆಡ್ ಕಿಂಗ್‌ಡಮ್ 90 ರ‍್ಯಾಂಕಿಂಗ್ ಸಂಸ್ಥೆಗಳನ್ನು ಮತ್ತು ಚೀನಾ 71 ರ‍್ಯಾಂಕಿಂಗ್ ಸಂಸ್ಥೆಗಳನ್ನು ಹೊಂದುವ ಮೂಲಕ ಕ್ರಮವಾಗಿ ನಂತರದ 3 ಮತ್ತು 4ನೇ ಸ್ಥಾನದಲ್ಲಿವೆ.
* ಭಾರತೀಯ ವಿಶ್ವವಿದ್ಯಾಲಯಗಳು, ಐಐಟಿಗಳು, ಐಐಎಂಗಳು ಸೇರಿದಂತೆ 9 ಶಿಕ್ಷಣ ಸಂಸ್ಥೆಗಳು ನಿರ್ದಿಷ್ಟ ವಿಷಯಗಳಲ್ಲಿ ವಿಶ್ವದ ಅಗ್ರ 50ರಲ್ಲಿ ಸ್ಥಾನ ಪಡೆದಿವೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ ಮತ್ತು ಐಐಟಿ ಬಾಂಬೆ ಟಾಪ್ 50ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಐಐಟಿಗಳು, ಎರಡು ಐಐಎಂಗಳು ಮತ್ತು ಜೆಎನ್‌ಯುಗಳ ರ‍್ಯಾಂಕಿಂಗ್ ಕುಸಿತ ಕಂಡಿವೆ. ಐಎಸ್‌ಎಂ ಧನ್‌ಬಾದ್ ಜಾಗತಿಕ ಮಟ್ಟದಲ್ಲಿ 20ನೇ ರ‍್ಯಾಂಕ್ ಪಡೆದುಕೊಂಡಿದೆ.* ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ಗಮನಾರ್ಹ ಪ್ರಗತಿ ಸಾಧಿಸಿದ್ದು, ಕಳೆದ ವರ್ಷ 45ನೇ ಸ್ಥಾನದಲ್ಲಿದ್ದವು, ಈಗ ಕ್ರಮವಾಗಿ 26 ಮತ್ತು 28ನೇ ಸ್ಥಾನಕ್ಕೆ ಏರಿವೆ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್‌ನಲ್ಲಿ ಎರಡೂ ಟಾಪ್ 50ರಲ್ಲಿ ಸ್ಥಾನ ಪಡೆದಿವೆ. * ಐಐಎಂ ಅಹಮದಾಬಾದ್ ಮತ್ತು ಐಐಎಂ ಬೆಂಗಳೂರು ವ್ಯವಹಾರ ಮತ್ತು ನಿರ್ವಹಣಾ ಅಧ್ಯಯನ ವಿಭಾಗದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಆದರೆ ಹಿಂದಿನ ರ‍್ಯಾಂಕಿಂಗ್ ಗಿಂತ ಕೆಳಮಟ್ಟಕ್ಕೆ ಇಳಿದಿವೆ. ಐಐಎಂ ಅಹಮದಾಬಾದ್ 22ರಿಂದ 27ನೇ ಸ್ಥಾನಕ್ಕೆ ಕುಸಿದರೆ, ಐಐಎಂ ಬೆಂಗಳೂರು 32ರಿಂದ 40ನೇ ಸ್ಥಾನಕ್ಕೆ ಕುಸಿದಿವೆ. ಅದೇ ರೀತಿ ಐಐಟಿ ಮದ್ರಾಸ್ (ಪೆಟ್ರೋಲಿಯಂ ಎಂಜಿನಿಯರಿಂಗ್) ಮತ್ತು ಜೆಎನ್‌ಯು (ಅಭಿವೃದ್ಧಿ ಅಧ್ಯಯನ) ಟಾಪ್ 50ರಲ್ಲಿ ಉಳಿದಿವೆ.* ಟಾಪ್ 10 ರ‍್ಯಾಂಕ್ ಪಡೆದ ವಿಶ್ವವಿದ್ಯಾಲಯಗಳು : 1. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಯುಎಸ್ (100)2. ಇಂಪೀರಿಯಲ್ ಕಾಲೇಜ್, ಲಂಡನ್ (98.5)3. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ (96.9)4. ಹಾರ್ವರ್ಡ್ ವಿಶ್ವವಿದ್ಯಾಲಯ (96.8)5. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (96.7)6. ಸ್ಪ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ (96.1)7. ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜ್ಯೂರಿಚ್ (93.9)8. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯ (93.7)9. ಯೂನಿವರ್ಸಿಟಿ ಕಾಲೇಜ್ (91.6)10. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (90.9)