* ದೇಶದ ಅತ್ಯುತ್ತಮ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ-ಬಿ) ಅಗ್ರಸ್ಥಾನ ಗಳಿಸಿದೆ. ಜಾಗತಿಕ ಸಂಸ್ಥೆಯಾಗಿರುವ ಫೈನಾನ್ಸಿಯಲ್ ಟೈಮ್ಸ್ 2025ನೇ ವರ್ಷದ ಶ್ರೇಯಾಂಕಗಳ ವರದಿ ಯಲ್ಲಿ ರಾಜಧಾನಿಯ ಐಐಎಂಗೆ 28ನೇ ರ್ಯಾಂಕ್ ದೊರೆತಿದೆ. ಭಾರತದ ಅತ್ಯುತ್ತಮ ಮ್ಯಾನೇಜ್ ಮೆಂಟ್ ಸಂಸ್ಥೆ ಎಂಬ ಮಾನ್ಯತೆ ಪಡೆದಿದೆ. * ಎನ್ಐಆರ್ಎಫ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದಿದ್ದ ಅಹಮದಾಬಾದ್ ಐಐಎಂ ಹಿಂದಿಕ್ಕಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಬಾರಿ ಐಐಎಂ ಅಹಮದಾಬಾದ್ 34ನೇ ರ್ಯಾಂಕ್ ಗಳಿಸಿದೆ. ಕೋಲ್ಕತ್ತ ಐಐಎಂ 41ನೇ ರ್ಯಾಂಕ್ , ಲಖನೌ ಐಐಎಂ- 57, ಕೋಳಿಕ್ಕೋಡ್-69ನೇ ರ್ಯಾಂಕ್ ಗಳಿಸಿದೆ. * ಈ ಜಾಗತಿಕ ಸಮೀಕ್ಷೆಯಲ್ಲಿ ಒಟ್ಟು 100 ಬಿಜಿನೆಸ್ ಸ್ಕೂಲ್ಗಳನ್ನು ಗುರುತಿಸಿ ರ್ಯಾಂಕ್ ನೀಡಲಾಗಿದೆ. ಸ್ವಿಜರ್ಲೆಂಡ್ನ ಬಿಜಿನೆಸ್ ಸ್ಕೂಲ್ ಮೊದಲ ರ್ಯಾಂಕ್ ಪಡೆದಿದೆ. ದೇಶದ ಒಟ್ಟು 11 ಬಿಜಿನೆಸ್ ಸ್ಕೂಲ್ಗಳು ಈ ಪಟ್ಟಿಯಲ್ಲಿವೆ ಎಂಬುದು ಗಮನಾರ್ಹ. * ಅಂತರರಾಷ್ಟ್ರೀಯ ವ್ಯವಹಾರಗಳ ಕಚೇರಿಯ ಕಾರ್ಯಕ್ರಮಗಳ ಡೀನ್ ಮತ್ತು ಅಧ್ಯಕ್ಷೆ ಮುಕ್ತಾ ಕುಲಕರ್ಣಿ ಮಾತನಾಡಿ, 2025 ರ FT MiM ಶ್ರೇಯಾಂಕಗಳು ಸಂಸ್ಥೆಯು ತನ್ನ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಭ್ರಾತೃತ್ವ ಹಾಗೂ ಅದರ ಆಡಳಿತ ಮಂಡಳಿಯಲ್ಲಿ ಬೆಳೆಸಿರುವ ವೈವಿಧ್ಯತೆಯಿಂದ ನೆರವಾಗಿದೆ ಎಂದು ಹೇಳಿದರು.* ಭಾರತದ ಟಾಪ್ 10 ಬಿಸಿನೆಸ್ ಸ್ಕೂಲ್ ಗಳ ಪಟ್ಟಿ 28 ರ್ಯಾಂಕ್ ಐಐಎಂ ಬೆಂಗಳೂರು - ಬೆಂಗಳೂರು34 ರ್ಯಾಂಕ್ ತಿಂಗಳುಗಳು ಐಐಎಂ ಅಹಮದಾಬಾದ್ - ಅಹಮದಾಬಾದ್35 ರ್ಯಾಂಕ್ ಎಸ್.ಪಿ. ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ರಿಸರ್ಚ್ - ಮುಂಬೈ41 ರ್ಯಾಂಕ್ ಐಐಎಂ ಕಲ್ಕತ್ತಾ - ಕೋಲ್ಕತ್ತಾ57 ರ್ಯಾಂಕ್ ಐಐಎಂ ಲಕ್ನೋ - ಲಕ್ನೋ58 ರ್ಯಾಂಕ್ XLRI — ಕ್ಸೇವಿಯರ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ - ಜಮ್ಶೆಡ್ಪುರ69 ರ್ಯಾಂಕ್ ಐಐಎಂ ಕೋಝಿಕ್ಕೋಡ್ - ಕೋಝಿಕ್ಕೋಡ್72 ರ್ಯಾಂಕ್ ನಿರ್ವಹಣಾ ಅಭಿವೃದ್ಧಿ ಸಂಸ್ಥೆ (MDI) - ಗುರಗಾಂವ್81 ರ್ಯಾಂಕ್ ಐಐಎಂ ಇಂದೋರ್ - ಇಂದೋರ್98 ರ್ಯಾಂಕ್ ಐಐಎಂ ಉದಯಪುರ - ಉದಯಪುರ99 ರ್ಯಾಂಕ್ ಅಂತರರಾಷ್ಟ್ರೀಯ ನಿರ್ವಹಣಾ ಸಂಸ್ಥೆ (IMI) - ದೆಹಲಿ* ವಿಶ್ವದ ಟಾಪ್ 10 ಬಿಸಿನೆಸ್ ಶಾಲೆಗಳ ಪಟ್ಟಿ : 1 ರ್ಯಾಂಕ್ ಸೇಂಟ್ ಗ್ಯಾಲೆನ್ ವಿಶ್ವವಿದ್ಯಾಲಯ - ಸ್ವಿಟ್ಜರ್ಲ್ಯಾಂಡ್2 ರ್ಯಾಂಕ್ HEC ಪ್ಯಾರಿಸ್ - ಫ್ರಾನ್ಸ್3 ರ್ಯಾಂಕ್ ಇನ್ಸೀಡ್ - ಫ್ರಾನ್ಸ್/ಸಿಂಗಾಪುರ ಕ್ಯಾಂಪಸ್4 ರ್ಯಾಂಕ್ ತ್ಸಿಂಗುವಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಶಾಲೆ - ಚೀನಾ5 ರ್ಯಾಂಕ್ ನೋವಾ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಎಕನಾಮಿಕ್ಸ್ - ಪೋರ್ಚುಗಲ್6 ರ್ಯಾಂಕ್ ಶಾಂಘೈ ಜಿಯಾವೊ ಟಾಂಗ್ ವಿಶ್ವವಿದ್ಯಾಲಯ: ಅಂತೈ - ಚೀನಾ7 ರ್ಯಾಂಕ್ ಇ.ಎಸ್.ಸಿಪಿ. ಬಿಸಿನೆಸ್ ಸ್ಕೂಲ್ - ಫ್ರಾನ್ಸ್8 ರ್ಯಾಂಕ್ ಟೋಂಗ್ಜಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಶಾಲೆ - ಚೀನಾ9 ರ್ಯಾಂಕ್ ಸ್ಟಾಕ್ಹೋಮ್ ಸ್ಕೂಲ್ ಆಫ್ ಎಕನಾಮಿಕ್ಸ್ - ಸ್ವೀಡನ್10 ರ್ಯಾಂಕ್ ಲಂಡನ್ ಬಿಸಿನೆಸ್ ಸ್ಕೂಲ್ - ಯುಕೆ