* 2025 ರ ಕ್ಯೂಎಸ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಭಾರತದ 78 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ. ಈ 78 ವಿಶ್ವವಿದ್ಯಾಲಯಗಳಲ್ಲಿ 10 ವಿ.ವಿಗಳು ಹಿಂದಿನ ವರ್ಷಗಳಿಂದ ಸುಧಾರಣೆ ಕಂಡಿದ್ದು, 21 ಸಂಸ್ಥೆಗಳು ಹೊಸದಾಗಿ ಸೇರ್ಪಡೆಗೊಂಡಿವೆ.* ಪರಿಸರ ಶಿಕ್ಷಣಕ್ಕೆ ಸಂಬಂಧಿಸಿ ಅಗ್ರಸ್ಥಾನದಲ್ಲಿರುವ ವಿಶ್ವದ 50 ಶಿಕ್ಷಣಸಂಸ್ಥೆಗಳಲ್ಲಿ ಬೆಂಗಳೂರಿನಲ್ಲಿರುವ ವಿಜ್ಞಾನ ಭಾರತೀಯ ಸಂಸ್ಥೆಯು (ಐಐಎಸ್ಸಿ) ಒಂದಾಗಿದೆ ಎಂದು ಕ್ಯೂಎಸ್ ಶ್ರೇಯಾಂಕ ಪಟ್ಟಿ ತಿಳಿಸಿದೆ.* ದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯು ಸುಸ್ಥಿರತೆಗೆ ಸಂಬಂಧಿಸಿ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, ಜಾಗತಿಕ ಮಟ್ಟದ 255 ಸಂಸ್ಥೆಗಳ ಪಟ್ಟಿಯಲ್ಲಿ 171ನೇ ಸ್ಥಾನವನ್ನು ಪಡೆದುಕೊಂಡಿದೆ.* ಪರಿಸರ ಸಂಬಂಧಿತ ವಿಚಾರದಲ್ಲಿ ದೆಹಲಿ ಮತ್ತು ಕಾನ್ಸುರ ಐಐಟಿಗಳು ವಿಶ್ವದ ಅಗ್ರ 100 ಶಿಕ್ಷಣಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.* 'ಭಾರತೀಯ ಉನ್ನತ ಶಿಕ್ಷಣ ವಲಯವು ಉತ್ತಮ ಸಾಧನೆ ಮಾಡಿದೆ. ಭಾರತದ ವಿ.ವಿಗಳು ಸುಸ್ಥಿರ ಪರಿಸರದ ಗುರಿಯೊಂದಿಗೆ ಮುನ್ನುಗ್ಗುತ್ತಿವೆ' ಎಂದು ಲಂಡನ್ ಮೂಲದ ಕ್ಯೂಎಸ್ ಸಂಸ್ಥೆಯ ಉಪಾಧ್ಯಕ್ಷ ಬೆನ್ ಸೌಟರ್ ಅವರು ತಿಳಿಸಿದ್ದಾರೆ.