* ಸತತ ಮೂರನೇ ಬಾರಿಗೆ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಚಾಂಪಿಯನ್ ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ. ಮೆಲ್ಬೋರ್ನ್ನಲ್ಲಿ ಪ್ರತಿಷ್ಠಿತ ಐಸಿಸಿ ಮಹಿಳಾ ಚಾಂಪಿಯನ್ಶಿಪ್ ಟ್ರೋಫಿ ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಮತ್ತು ಐಸಿಸಿ ನಿರ್ದೇಶಕ ಮೈಕ್ರಿಂದ ಕ್ಯಾಪ್ಟನ್ ಅಲಿಸ್ಸಾ ಹೀಲಿ ಟ್ರೋಫಿಯನ್ನು ಸ್ವೀಕರಿಸಿದರು. ಈ ಗೆಲುವು ಮಹಿಳಾ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಸ್ಥಿರತೆ ಮತ್ತು ಪ್ರಾಬಲ್ಯವನ್ನು ಎತ್ತಿ ತೋರಿಸುತ್ತದೆ.* ಮಹಿಳಾ ಕ್ರಿಕೆಟ್ ಅನ್ನು ಬೆಳೆಸಲು ಮತ್ತು ನಿಯಮಿತ ಅಂತರಾಷ್ಟ್ರೀಯ ಸರಣಿಗಳನ್ನು ಖಚಿತಪಡಿಸಿಕೊಳ್ಳಲು 2014 ರಲ್ಲಿ ಮೊದಲು ಪರಿಚಯಿಸಲಾಯಿತು. ಮೊದಲ ಎರಡು ಆವೃತ್ತಿಗಳು (2014-16 ಮತ್ತು 2017-20) 8 ತಂಡಗಳನ್ನು ಒಳಗೊಂಡಿತ್ತು, ಅವುಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್. ಮೂರನೇ ಆವೃತ್ತಿ (2022-25) ಬಾಂಗ್ಲಾದೇಶ ಮತ್ತು ಐರ್ಲೆಂಡ್ ಅನ್ನು ಸೇರಿಸುವ ಮೂಲಕ 10 ತಂಡಗಳಿಗೆ ವಿಸ್ತರಿಸಲಾಯಿತು.* ICC ಮಹಿಳಾ ಕ್ರಿಕೆಟ್ ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ 24 ಪಂದ್ಯಗಳಿಂದ 39 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.* ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಗೆ ನೇರವಾಗಿ ಅರ್ಹತೆ ಪಡೆದ ಇತರ ತಂಡಗಳು:- ಭಾರತ (37 ಅಂಕ)- ಇಂಗ್ಲೆಂಡ್ (32 ಅಂಕ)- ದಕ್ಷಿಣ ಆಫ್ರಿಕಾ (25 ಅಂಕ)- ಶ್ರೀಲಂಕಾ (22 ಅಂಕ)- ನ್ಯೂಜಿಲೆಂಡ್ (21 ಅಂಕಗಳು)* ಕ್ವಾಲಿಫೈಯರ್ಗೆ ಹೋಗುವ ತಂಡಗಳು : - ಬಾಂಗ್ಲಾದೇಶ (21 ಅಂಕಗಳು, ಕಡಿಮೆ ಗೆಲುವಿನಿಂದ ನೇರ ಅರ್ಹತೆ ಕಳೆದುಕೊಂಡಿತು)- ವೆಸ್ಟ್ ಇಂಡೀಸ್ (18 ಅಂಕ)- ಪಾಕಿಸ್ತಾನ (17 ಅಂಕ)- ಐರ್ಲೆಂಡ್ (8 ಅಂಕಗಳು)- ಕ್ವಾಲಿಫೈಯರ್ನಲ್ಲಿ ಹೆಚ್ಚುವರಿ ತಂಡಗಳು: ಸ್ಕಾಟ್ಲ್ಯಾಂಡ್ ಮತ್ತು ಥೈಲ್ಯಾಂಡ್ (ಅಕ್ಟೋಬರ್ 31, 2024 ರಂತೆ ಅತ್ಯುನ್ನತ ಶ್ರೇಯಾಂಕದಲ್ಲಿದೆ).