* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ವಿ. ನಾರಾಯಣನ್ ವಣನ್ ಅವರು 2025ನೇ ವರ್ಷವನ್ನು "ಗಗನಯಾನ ವರ್ಷ" ಎಂದು ಘೋಷಿಸಿದ್ದಾರೆ.* ಮಾನವಸಹಿತ ಬಾಹ್ಯಾಕಾಶ ಯಾನದ ದಿಕ್ಕಿನಲ್ಲಿ ಭಾರತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ನಡೆದಿದೆ.* ಕೋಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ಮೂರು ಮಾನವರಹಿತ ಯಾತ್ರೆಗಳನ್ನು ಇಸ್ರೋ ಯೋಜಿಸಿದೆ ಎಂದು ತಿಳಿಸಿದರು. ಇದರಲ್ಲಿ ‘ವೋಮ ಮಿತ್ರ’ ಎಂಬ ಮೊದಲ ಕಾರ್ಯಾಚರಣೆ ಈ ವರ್ಷವೇ ನಡೆಯಲಿದೆ.* ಈಗಾಗಲೇ 7,200ಕ್ಕೂ ಹೆಚ್ಚು ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಇನ್ನೂ 3,000 ಪರೀಕ್ಷೆಗಳು ಬಾಕಿಯಿವೆ.* ಇಸ್ರೋ ತಂಡ ದಿನಕ್ಕೆ ಎರಡು ಗಂಟೆಗಳ ಕಾಲ ನಿರಂತರವಾಗಿ ಈ ಕಾರ್ಯಗಳ ಮೇಲೆ ದುಡಿಯುತ್ತಿದೆ.* ನಾರಾಯಣನ್ ಅವರು ಸ್ಪೇಡೆಕ್ಸ್ ಯೋಜನೆಯ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದ್ದು, ಈ ಯೋಜನೆಗೆ 10 ಕಿಲೋ ಇಂಧನ ಬಳಸಲಾಗಿದೆ ಎಂದು ತಿಳಿಸಿದ್ದಾರೆ.* 2025ರಲ್ಲಿ ನಾಸಾ-ಇಸ್ರೋ ಸಹಯೋಗದ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ಸಹಿತ ಅನೇಕ ಉಪಗ್ರಹಗಳನ್ನು ಭಾರತೀಯ ಉಡಾವಣಾ ವಾಹನದಿಂದ ಉಡಾವಣೆ ಮಾಡುವ ಯೋಜನೆ ಇದೆ.* ಪ್ರಧಾನಿ ನರೇಂದ್ರ ಮೋದಿ ಅವರು 2018ರ ಆಗಸ್ಟ್ 15ರಂದು ಗಗನಯಾನ ಯೋಜನೆಯ ಘೋಷಣೆ ಮಾಡಿದ್ದು, ಭಾರತ 2021ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳಲು ಯೋಜಿಸಿತ್ತು.