ಮುಂದುವರೆಯುವುದು.. * ಈ ಧ್ಯೇಯಕ್ಕೆ ಅನುಗುಣವಾಗಿ, ಹಣಕಾಸು ಸಚಿವರು ಈ ಕೆಳಗಿನವುಗಳನ್ನು ಒಳಗೊಂಡಿರುವ ವಿಕಸಿತ ಭಾರತದ ವಿಶಾಲ ತತ್ವಗಳನ್ನು ವಿವರಿಸಿದರು:ಎ) ಶೂನ್ಯ ಬಡತನ;ಬಿ) ನೂರು ಪ್ರತಿಶತ ಉತ್ತಮ ಗುಣಮಟ್ಟದ ಶಾಲಾ ಶಿಕ್ಷಣ;ಸಿ) ಉತ್ತಮ ಗುಣಮಟ್ಟದ, ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ರಕ್ಷಣೆಗೆ ಪ್ರವೇಶ;ಡಿ) ಅರ್ಥಪೂರ್ಣ ಉದ್ಯೋಗದೊಂದಿಗೆ ನೂರು ಪ್ರತಿಶತ ಕುಶಲ ಕಾರ್ಮಿಕರು;ಇ) ಆರ್ಥಿಕ ಚಟುವಟಿಕೆಗಳಲ್ಲಿ ಎಪ್ಪತ್ತು ಪ್ರತಿಶತ ಮಹಿಳೆಯರು; ಮತ್ತುಎಫ್) ರೈತರು ನಮ್ಮ ದೇಶವನ್ನು 'ವಿಶ್ವದ ಆಹಾರ ಬುಟ್ಟಿ'ಯನ್ನಾಗಿ ಮಾಡುತ್ತಿದ್ದಾರೆ.* ಒಟ್ಟಾರೆ ಬಜೆಟ್ ಮೊತ್ತದಲ್ಲಿ ರಕ್ಷಣಾ ವಲಯಕ್ಕೆ ಅತಿ ಹೆಚ್ಚು ಶೇಕಡಾ 9 ರಷ್ಟು ಮೀಸಲಿಡಲಾಗಿದೆ. ಉಳಿದಂತೆ ಗಾಮೀಣ ಅಭಿವೃದ್ಧಿ ಶೇಕಡಾ ಶೇ 5 ರಷ್ಟು, ಗೃಹ ಇಲಾಖೆಗೆ ಶೇಕಡಾ 4 ರಷ್ಟು, ಕೃಷಿಗೆ 3.3 ರಷ್ಟು , ಶಿಕ್ಷಣಕ್ಕೆ 2.9 ರಷ್ಟು ಹಣವನ್ನು ಮೀಸಲಿಡಲಾಗಿದೆ.* ಇಲಾಖೆ/ ವಲಯ - ಮೀಸಲಿಟ್ಟ ಹಣರಕ್ಷಣೆ - 4,91,732 ಕೋಟಿ ರೂ.ಗ್ರಾಮೀಣ ಅಭಿವೃದ್ಧಿ - 2,66,817 ಕೋಟಿ ರೂ.ಗೃಹ ಇಲಾಖೆ - 2,33,211 ಕೋಟಿ ರೂ.ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆ - 1,71,437 ಕೋಟಿ ರೂ.ಶಿಕ್ಷಣ - 1,28,650 ಕೋಟಿ ರೂ.ಆರೋಗ್ಯ - 98,311 ಕೋಟಿ ರೂ.ನಗರಾಭಿವೃದ್ಧಿ - 96,777 ಕೋಟಿ ರೂ.ಐಟಿ ಮತ್ತು ಟೆಲಿಕಾಂ - 95,298 ಕೋಟಿ ರೂ.ಇಂಧನ - 81,174 ಕೋಟಿ ರೂ.ವಾಣಿಜ್ಯ ಮತ್ತು ಕೈಗಾರಿಕೆ - 65,553 ಕೋಟಿ ರೂ.ಸಮಾಜ ಕಲ್ಯಾಣ - 60,052 ಕೋಟಿ ರೂ.ವಿಜ್ಞಾನ ಇಲಾಖೆಗಳು - 55,679 ಕೋಟಿ ರೂ.* ಬಜೆಟ್ನ ಪ್ರಮುಖ ಘೋಷಣೆಗಳು - ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ಪೋರ್ಟಲ್ನಲ್ಲಿ ನೋಂದಣಿಗೆ ವ್ಯವಸ್ಥೆ.- ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ 10,000 ಸೀಟುಗಳು ಸೇರ್ಪಡೆ.- ಮುಂದಿನ 3 ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ.- ಮುಂದಿನ 10 ವರ್ಷಗಳಲ್ಲಿ 4 ಕೋಟಿ ಹೆಚ್ಚುವರಿ ಪ್ರಯಾಣಿಕರಿಗೆ ಸಹಾಯ ಮಾಡಲು 120 ಕಡೆಗಳಲ್ಲಿ ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣ ಸ್ಥಾಪನೆ.- ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಮುಖ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿ.20,000 ಕೋಟಿ ರೂ. ಪರಮಾಣು ಮಿಷನ್.- ಗ್ರಾಮೀಣ ಆರ್ಥಿಕತೆಗೆ ವೇಗಕ್ಕೆ 1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳೊಂದಿಗೆ ಭಾರತ ಅಂಚೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧಾರ.- ಆರಂಭದಿಂದಲೂ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿರುವ ಮೋದಿ ಸರ್ಕಾರವು ಈ ಬಾರಿಯ ಬಜೆಟ್ನಲ್ಲಿ ಎಲೆಕ್ಟ್ರಿಕ್ ವಾಹನಗಳ ದರವನ್ನು ಇಳಿಕೆ ಮಾಡಿದೆ. - 2025ರ ಕೇಂದ್ರ ಬಜೆಟ್ನಲ್ಲಿ ಎಲ್ಡಿಟಿ ಟಿವಿಯ ದರ ಇಳಿಕೆಯಾಗಿದೆ. - ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬಜೆಟ್ನಲ್ಲಿ ಮೊಬೈಲ್ ಪೋನ್ಗಳ ದರ ಇಳಿಕೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಸಂತಸವಾಗುವಂತೆ ಮಾಡಿದ್ದಾರೆ.- ಫ್ಯಾಷನ್ ಪ್ರಿಯರು ನೀವಾಗಿದ್ದರೆ ಈ ಬಜೆಟ್ ಖಂಡಿತ ನಿಮಗೆ ಇಷ್ಟವಾಗುತ್ತದೆ. ಸ್ವದೇಶಿ ಬಟ್ಟೆಗಳ ಮೇಲಿನ ದರವನ್ನು ಕಡಿತಗೊಳಿಸಲಾಗಿದೆ. - ಈ ಬಜೆಟ್ನಲ್ಲಿ ಟೆಲಿಕಾಂ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ 15 ರಷ್ಟು ಹೆಚ್ಚಳ ಮಾಡಲಾಗಿದೆ. - ಪ್ಯಾನೆಲ್ ಡಿಸ್ಪ್ಲೇ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 10 ರಿಂದ 20ಕ್ಕೆ ಹೆಚ್ಚಳ ಮಾಡಲಾಗಿದೆ. - ಪ್ಲಾಸ್ಟಿಕ್ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 25 ರಷ್ಟು ಹೆಚ್ಚಳ ಮಾಡಲಾಗಿದೆ.