* ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ (ಫೆಬ್ರುವರಿ 1) ಮಂಡಿಸಿದರು.* ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಸತತ 8ನೇ ಬಜೆಟ್ ಇದಾಗಿದ್ದು, 75 ನಿಮಿಷಗಳಲ್ಲಿ ಮುಕ್ತಾಯವಾಯಿತು. 2020ರಲ್ಲಿ 2 ಗಂಟೆ 40 ನಿಮಿಷ ಬಜೆಟ್ ಮಂಡಿಸಿ 'ದೀರ್ಘ ಬಜೆಟ್' ಎಂಬ ದಾಖಲೆ ಬರೆದಿದ್ದ ನಿರ್ಮಲಾ ಸೀತಾರಾಮನ್ ಅವರ ಪಾಲಿಗೆ ಇದು, ಎರಡನೇ 'ಕಿರು' ಬಜೆಟ್ ಆಗಿದೆ.* ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ್ದು, ಅತಿಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ದೇಶದ ಮಹಿಳಾ ಹಣಕಾಸು ಮುಖ್ಯಮಂತ್ರಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.* ಈ ಬಜೆಟ್ ಮಂಡನೆ ಮೂಲಕ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಮೂರನೇ ಸ್ಥಾನಕ್ಕೇರಿಕೆ ಕಂಡಿದ್ದು, ಯಶವಂತ್ ಸಿನ್ಹಾ ಹಾಗೂ ಸಿಡಿ ದೇಶ್‌ಮುಖ್ ಅವರನ್ನು ಹಿಂದಿಕ್ಕಿದ್ದಾರೆ.- ಭಾರತದ ಬಜೆಟ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವರ ಪಟ್ಟಿಮೊರಾರ್ಜಿ ದೇಸಾಯಿ - 10ಚಿದಂಬರಂ - 9ಪ್ರಣಬ್ ಮುಖರ್ಜಿ - 8ನಿರ್ಮಲಾ ಸೀತಾರಾಮನ್ - 8ಯಶವಂತ್ ಸಿನ್ಹಾ - 7ಸಿಡಿ ದೇಶ್‌ಮುಖ್ - 7* ನಿರ್ಮಲಾ ಸೀತಾರಾಮನ್ - 2019ರಲ್ಲಿ 2 ಗಂಟೆ 17 ನಿಮಿಷ- 2021ರಲ್ಲಿ 1 ಗಂಟೆ 50 ನಿಮಿಷ- 2022ರಲ್ಲಿ 1 ಗಂಟೆ 32 ನಿಮಿಷ- 2023ರಲ್ಲಿ 1 ಗಂಟೆ 27 ನಿಮಿಷದಲ್ಲಿ ಬಜೆಟ್ ಓದಿದ್ದರು.* ವೈದ್ಯಕೀಯ ಸೀಟು ಹೆಚ್ಚಳ- ಮುಂದಿನ ವರ್ಷದಲ್ಲಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುವರಿಯಾಗಿ 10000 ಸೀಟುಗಳು ಹಾಗೂ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ 75 ಸಾವಿರ ವೈದ್ಯಕೀಯ ಸೀಟುಗಳನ್ನು ಹೊಂದುವ ಗುರಿಯನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ‘ನಮ್ಮ ಸರ್ಕಾರವು 10 ವರ್ಷಗಳಲ್ಲಿ ಯು.ಜಿ ಮತ್ತು ಪಿ.ಜಿ ವೈದ್ಯಕೀಯ ಸೀಟುಗಳಿಗ ಸಂಖ್ಯೆಯನ್ನು 1.1 ಲಕ್ಷದಷ್ಟು ಹೆಚ್ಚಿಸಿದೆ. ಇದು ಶೇ 130ರಷ್ಟು ಹೆಚ್ಚಳವಾಗಿದೆ’ ಎಂದು ಸಚಿವರು ಹೇಳಿದ್ದಾರೆ.* 2025-26ನೇ ಸಾಲಿಗೆ, ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚಗಳು ಕ್ರಮವಾಗಿ ₹34.96 ಲಕ್ಷ ಕೋಟಿ ಮತ್ತು ₹50.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ನಿವ್ವಳ ತೆರಿಗೆ ಸ್ವೀಕೃತಿಗಳು ₹28.37 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.* 2025–26ನೇ ಆರ್ಥಿಕ ಸಾಲಿನಲ್ಲಿಯೂ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು ಮಂದಗತಿಯಲ್ಲಿಯೇ ಇರಲಿದೆ ಎಂದು ಸಂಸತ್‌ನಲ್ಲಿ ಮಂಡನೆಯಾದ 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.- ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಈ ಸಮೀಕ್ಷೆ ಮಂಡಿಸಿದರು. 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.4ರಷ್ಟು ಹಾಗೂ 2025–26 ರಲ್ಲಿ ಶೇ 6.3ರಿಂದ ಶೇ 6.8ರಷ್ಟು ಪ್ರಗತಿ ಕಾಣಲಿದೆ ಎಂದು ಸಮೀಕ್ಷೆ ಹೇಳಿದೆ.- "ಮೇಕ್ ಇನ್ ಇಂಡಿಯಾ" ಮುಂದುವರಿಸಲು ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳನ್ನು ಒಳಗೊಂಡ ರಾಷ್ಟ್ರೀಯ ತಯಾರಿಕಾ ಮಿಷನ್- ಮುಂದಿನ 5 ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಗಳು-ಒಟ್ಟು ₹500 ಕೋಟಿ ವೆಚ್ಚದಲ್ಲಿ ಶಿಕ್ಷಣಕ್ಕಾಗಿ ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ- ಬ್ಯಾಂಕುಗಳಿಂದ ವರ್ಧಿತ ಸಾಲಗಳೊಂದಿಗೆ ಪಿಎಂ ಸ್ವನಿಧಿ ಮತ್ತು ₹30,000 ಮಿತಿಯೊಂದಿಗೆ ಯುಪಿಐ ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ ಗಳು- ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿಗಳು. ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಣಿ ಮತ್ತು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅಡಿಯಲ್ಲಿ ಆರೋಗ್ಯ ಸೇವೆ- 'ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು' ಯೋಜನೆಗಾಗಿ ₹1 ಲಕ್ಷ ಕೋಟಿಯ ಅರ್ಬನ್ ಚಾಲೆಂಜ್ ಫಂಡ್ - ₹20,000 ಕೋಟಿ ವೆಚ್ಚದಲ್ಲಿ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್- 120 ಹೊಸ ಸ್ಥಳಗಳಿಗೆ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಉಡಾನ್ ಯೋಜನೆಯ ಪರಿಷ್ಕರಣೆ- ಸಂಕಷ್ಟದಲ್ಲಿರುವ 1 ಲಕ್ಷ ವಸತಿ ಘಟಕಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ₹15,000 ಕೋಟಿ ಸ್ವಾಮಿಹ್ ನಿಧಿಯ ಸ್ಥಾಪನೆ.- ಖಾಸಗಿ ವಲಯವು ನಡೆಸುವ ಸಂಶೋಧನೆ ಅಭಿವೃದ್ಧಿ ಮತ್ತು ನಾವೀನ್ಯತೆ ಉಪಕ್ರಮಗಳಿಗೆ ₹ 20,000 ಕೋಟಿ ಮೀಸಲು- ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಂಡ ಹಸ್ತಪ್ರತಿಗಳ ಸಮೀಕ್ಷೆ ಮತ್ತು ಸಂರಕ್ಷಣೆಗಾಗಿ ಜ್ಞಾನ್ ಭಾರತಂ ಮಿಷನ್- ವಿಮೆ ಕೇತ್ರದ ಎಫ್ ಡಿ ಐ ಮಿತಿ ಶೇ.74 ರಿಂದ ಶೇ.100 ಕ್ಕೆ ಹೆಚ್ಚಳ - ವಿವಿಧ ಕಾನೂನುಗಳಲ್ಲಿ 100 ಕ್ಕಿಂತ ಹೆಚ್ಚಿನ ನಿಬಂಧನೆಗಳನ್ನು ನಿರಪರಾಧೀಕರಣಗೊಳಿಸಲು ಜನ್ ವಿಶ್ವಾಸ್ ಮಸೂದೆ 2.0 ಅನ್ನು ಮಂಡಿಸಲಾಗುವುದು.- ನವೀಕರಿಸಿದ ಆದಾಯ ತೆರಿಗೆ ಸಲ್ಲಿಕೆ ಸಮಯದ ಮಿತಿಯನ್ನು ಎರಡರಿಂದ ನಾಲ್ಕು ವರ್ಷಗಳವರೆಗೆ ಹೆಚ್ಚಿಸಲಾಗಿದೆ.- ಟಿಸಿಎಸ್ ಪಾವತಿಯಲ್ಲಿನ ವಿಳಂಬವನ್ನು ನಿರಪರಾಧೀಕರಣಗೊಳಿಸಲಾಗಿದೆ- ಬಾಡಿಗೆಯ ಮೇಲಿನ ಟಿಡಿಎಸ್ ₹2.4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಳ- ಕ್ಯಾನ್ಸರ್, ಅಪರೂಪದ ಮತ್ತು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗಾಗಿ 36 ಜೀವರಕ್ಷಕ ಔಷಧಗಳು ಮತ್ತು ಡ್ರಗ್ಸ್ ಮೇಲೆ ಬಿಸಿಡಿ ವಿನಾಯಿತಿ ನೀಡಲಾಗಿದೆ- ಐ ಎಫ್ ಪಿ ಡಿ ಯಲ್ಲಿ ಬಿಸಿಡಿ ಶೇ.20 ಕ್ಕೆ ಹೆಚ್ಚಿದೆ ಮತ್ತು ಓಪನ್ ಸೆಲ್ ಗಳಲ್ಲಿ ಶೇ.5 ಕ್ಕೆ ಕಡಿಮೆಯಾಗಿದೆ.- ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಓಪನ್ ಸೆಲ್ ಬಿಡಿಭಾಗಗಳಿಗೆ ಬಿಸಿಡಿ ವಿನಾಯಿತಿ- ಬ್ಯಾಟರಿ ಉತ್ಪಾದನೆಯನ್ನು ಹೆಚ್ಚಿಸಲು, ಇವಿ ಮತ್ತು ಮೊಬೈಲ್ ಬ್ಯಾಟರಿ ತಯಾರಿಕೆಗೆ ಹೆಚ್ಚುವರಿ ಬಂಡವಾಳದ ಸರಕುಗಳಿಗೆ ವಿನಾಯಿತಿ ನೀಡಲಾಗಿದೆ.- ಕಚ್ಚಾ ವಸ್ತುಗಳು ಮತ್ತು ಹಡಗು ನಿರ್ಮಾಣಕ್ಕಾಗಿ ಬಳಸುವ ಬಿಡಿಭಾಗಗಳ ಮೇಲೆ 10 ವರ್ಷಗಳವರೆಗೆ ಬಿಸಿಡಿ ವಿನಾಯಿತಿ ನೀಡಲಾಗಿದೆ.- ಹೆಪ್ಪುಗಟ್ಟಿದ ಫಿಶ್ ಪೇಸ್ಟ್ ಗೆ ಶೇ.30 ರಿಂದ ಶೇ.5 ಕ್ಕೆ ಮತ್ತು ಫಿಶ್ ಹೈಡ್ರೊಲೈಜೆಟ್ ಗೆ ಶೇ.15 ರಿಂದ ಶೇ.5 ಕ್ಕೆ ಬಿಸಿಡಿ ಕಡಿಮೆಯಾಗಿದೆ.- ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದರು. ಅವರ ಬಜೆಟ್ ಭಾಷಣದ ಸಾರಾಂಶ ಇಲ್ಲಿದೆ;