* 2025-26ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.6.8ಕ್ಕೆ ತಲುಪಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಅಂದಾಜಿಸಿದೆ.* ಆದಾಯ ತೆರಿಗೆ ಮಿತಿ 7 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ, ಆರ್ಬಿಐನಿಂದ ಬಡ್ಡಿದರ ಇಳಿಕೆ, ವಿದೇಶಿ ಹೂಡಿಕೆಯ ಹೆಚ್ಚಳ ಇತ್ಯಾದಿ ಬೆಳವಣಿಗೆಗೆ ಕಾರಣಗಳಾಗಿವೆ.* ಆರ್ಬಿಐ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಡ್ಡಿದರವನ್ನು ಎರಡು ಬಾರಿ ಇಳಿಸಿದ್ದು, ರೆಪೊ ದರ ಈಗ ಶೇ.6ಕ್ಕೆ ಇಳಿದಿದೆ. ಹಣದುಬ್ಬರದ ಪ್ರಮಾಣ ಅಂದಾಜುಕ್ಕಿಂತ ಕಡಿಮೆ ಇರುವುದರಿಂದ ಮುಂದುವರಿದ ಬಡ್ಡಿದರ ಇಳಿಕೆ ಸಾಧ್ಯವಾಗಿದೆ.* ಭಾರತ ಹೂಡಿಕೆಗೆ ತಕ್ಕ ಪರ್ಯಾಯ ತಾಣವಾಗಿ ಗುರುತಾಗಿದ್ದು, ಬಂಡವಾಳ ಹೂಡಿಕೆಗೆ ಅನುಕೂಲಕರ ಪರಿಸರ ನಿರ್ಮಾಣವಾಗಿದೆ.* ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿಸುತ್ತಿವೆ. ಆ್ಯಪಲ್ ಕಂಪನಿಯು ಭಾರತದಿಂದ ಹಿಂದೆ ಸರಿಯದಿರುವುದು ಇದಕ್ಕೆ ನಿದರ್ಶನವಾಗಿದೆ.* ಆದಾಯ ತೆರಿಗೆ ಮಿತಿ ಏರಿಕೆಯಿಂದ ತೆರಿಗೆದಾರರ ಕೈಯಲ್ಲಿ 1 ಲಕ್ಷ ಕೋಟಿ ರೂಪಾಯಿ ಉಳಿಯಲಿದ್ದು, ಇದು ಖರ್ಚು ಸಾಮರ್ಥ್ಯ ಹೆಚ್ಚಿಸಲು ಸಹಾಯಕವಾಗಲಿದೆ. ಪರಿಣಾಮವಾಗಿ, ಬೇಡಿಕೆ–ಪೂರೈಕೆ ಸರಪಳಿ ಬಲಗೊಳ್ಳಲಿದೆ.* ಅಮೆರಿಕದ ಅಧಿಕಾರಿಗಳ ತಂಡ ಜೂನ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಲಿದ್ದು, ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಪ್ರಗತಿಯಲ್ಲಿದೆ. ಜೂನ್ 25ರೊಳಗೆ ಮಧ್ಯಂತರ ಒಪ್ಪಂದಕ್ಕೆ ಸಾಧ್ಯತೆ ಇದೆ.