* ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿದ್ದು, ಪಾರ್ತಿಸುಬ್ಬ ಪ್ರಶಸ್ತಿಗೆ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ. * ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಈ ವಿಷಯ ಪ್ರಕಟಿಸಿದ್ದಾರೆ. * ಫೆಬ್ರವರಿ 16ರಂದು ಉಡುಪಿಯ ಕಲಾರಂಗದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿದೆ. * ಇದರೊಂದಿಗೆ 2024ನೇ ಸಾಲಿನ ಉಳಿದಂತೆ ಐವರಿಗೆ ಅಕಾಡಮಿ ಗೌರವ ಪ್ರಶಸ್ತಿ, 10 ಮಂದಿಗೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗೂ ದತ್ತಿನಿಧಿ ಪ್ರಶಸ್ತಿಗೆ ಯಕ್ಷಗಾನ ಕಲಾವಿದರು ಹಾಗೂ ವಿದ್ವಾಂಸರ ಹೆಸರುಗಳನ್ನು ಪ್ರಕಟಿಸಿದರು.* 10 ಕಲಾವಿದರಿಗೆ ಯಕ್ಷಸಿರಿ ಪ್ರಶಸ್ತಿ : 1) ಹಿರಿಯ ಅರ್ಥಧಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್2) ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಬಡಗುತಿಟ್ಟು3) ಮವ್ವಾರು ಬಾಲಕೃಷ್ಣ ಮಣಿಯಾಣಿ ತೆಂಕುತಿಟ್ಟು, ಹಾಸ್ಯಗಾರ, ಕಾಸರಗೋಡು4) ಉಮೇಶ್ ಕುಪ್ಪೆಪದವು ತೆಂಕುತಿಟ್ಟು. ಬಣ್ಣದ ವೇಷಧಾರಿ, ಮಂಗಳೂರು5) ಶಿವಾನಂದ ಗೀಜಗಾರು, ಬಡಗುತಿಟ್ಟು, ಸ್ತ್ರೀ ವೇಷಧಾರಿ, ಶಿವಮೊಗ್ಗ6) ಮುಗ್ವಾ ಗಣೇಶ್ ನಾಯ್ಕ ಬಡಗುತಿಟ್ಟು-ಸ್ತ್ರೀ ವೇಷಧಾರಿ, ಹೊನ್ನಾವರ7) ಸುರೇಂದ್ರ ಮಲ್ಲಿ ತೆಂಕುತಿಟ್ಟು-ಸ್ತ್ರೀ ವೇಷಧಾರಿ, ಮಂಗಳೂರು8) ಅಂಡಾಲ ದೇವಿಪ್ರಸಾದ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತ ಮತ್ತು ಭಾಗವತ ಮಂಗಳೂರು9) ಕೃಷ್ಣಪ್ಪ ಮೂಡಲಪಾಯ ಯಕ್ಷಗಾನ, ಬೆಂಗಳೂರು ಗ್ರಾಮಾಂತರ10) ಹಳುವಳ್ಳಿ ಜ್ಯೋತಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಚಿಕ್ಕಮಗಳೂರು* ಐವರಿಗೆ ಅಕಾಡಮಿ ಗೌರವ ಪ್ರಶಸ್ತಿ : - ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ - ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ- ಬಂಟ್ಚಾಳದ ರಾಘವ ದಾಸ್- ಬಂಟ್ವಾಳದ ಸುಬ್ರಾಯ ಹೊಳ್ಳ- ತುಮಕೂರಿನ ಕಾಂತರಾಜು * ದತ್ತಿ ನಿಧಿ ಪ್ರಶಸ್ತಿ : 2024ನೇ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ ಕರ್ಗಲ್ಲು ವಿಶ್ವೇಶ್ವರ ಭಟ್ಟ, ಬಂಟ್ವಾಳ ಆಯ್ಕೆಯಾಗಿದ್ದಾರೆ.* ಪಾರ್ತಿಸುಬ್ಬ ಪ್ರಶಸ್ತಿಯು 1ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಲಕವನ್ನು ಹೊಂದಿದೆ, ಅಕಾಡಮಿ ಗೌರವ ಪ್ರಶಸ್ತಿಯು 50 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಲಕವನ್ನು ಹೊಂದಿದೆ ಮತ್ತು ಯಕ್ಷಸಿರಿ ಪ್ರಶಸ್ತಿಯು 25 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪ್ರಲಕವನ್ನು ಹೊಂದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅವರು ತಿಳಿಸಿದ್ದಾರೆ.