* ಮೆಕ್ಸಿಕೋದಲ್ಲಿ ನಡೆದ 73 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ ನ್ ವಿಕ್ಟೋರಿಯಾದ 21 ವರ್ಷದ ಯುವತಿ  ಕೆಜೆರ್ ಥೀಲ್ವಿಗ್ ಅವರು ವಿಜೇತರಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದು ಡೆನ್ಮಾರ್ಕ್‌ನ ಮೊದಲ ವಿಶ್ವ ಸುಂದರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. * ಮಿಸ್ ಯೂನಿವರ್ಸ್ 2023 ರ ನಿಕರಾಗುವಾದ 24 ವರ್ಷದ ಶೆನ್ನಿಸ್ ಪಲಾಸಿಯೋಸ್ ಅವರು ಈ ಸುಂದರ ಕಿರೀಟವನ್ನು ವಿಕ್ಟೋರಿಯಾ ಕೆಜೆರ ಥೀಲ್ವಿಂಗ್‌ ಅವರಿಗೆ ತೊಡಿಸಿದರು.  * ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್ ಅವರು ಮೊದಲ ರನ್ನರ್ ಅಪ್ ಆಗಿ, ನೈಜೀರಿಯಾದ ಸಿನಿದಿಮ್ಮಾ ಅಡೆಟ್ಶಿನಾ ಅವರು ಎರಡನೇ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡರು.* ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ 120 ಕ್ಕೂ ಹೆಚ್ಚು ಇತರ ಸ್ಪರ್ಧಿಗಳು ಭಾಗವಹಿಸಿದ್ದರು, ಇದರಲ್ಲಿ ಭಾರತದ ರಿಯಾ ಸಿಂಘಾ ಅವರು ಸೇರಿದ್ದಾರೆ. ಆದರೆ ಈ ಬಾರಿ ರಿಯಾ ಸಿಂಘಾ  ಟಾಪ್-12ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. * ರಿಯಾ ಸಿಂಘಾ ಅವರು ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು ಗೆದ್ದಿದ್ದರು ಮತ್ತು ಭಾರತಕ್ಕೆ ನಾಲ್ಕನೇ ಬಾರಿಗೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುವ ಭರವಸೆ ಇತ್ತು.* ಪ್ರತಿಷ್ಠಿತ ಕಿರೀಟಕ್ಕಾಗಿ ಸ್ಪರ್ಧಿಸುತ್ತಿರುವ ತನ್ನ ಟಾಪ್ 5 ಸ್ಪರ್ಧಿಗಳನ್ನು ಅನಾವರಣಗೊಳಿಸಿದೆ. ಮೆಕ್ಸಿಕೊ, ನೈಜೀರಿಯಾ, ಥೈಲ್ಯಾಂಡ್, ವೆನೆಜುವೆಲಾ, ಮತ್ತು ಡೆನ್ಮಾರ್ಕ್ ಅಂತಿಮ ಪಂದ್ಯದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡವು,.* ರಿಯಾ ಸಿಂಘಾ ಅವರು ಮಿಸ್ ಟೀನ್ ಅರ್ಥ್ 2023 ಮತ್ತು ದಿವಾಸ್ ಮಿಸ್ ಟೀನ್ ಗುಜರಾತ್ 2020 ರಂತಹ ಪ್ರಶಸ್ತಿಗಳನ್ನು ಹೊಂದಿದ್ದಾರೆ.