* 2024 ರ ಪ್ಯಾರೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಸೆಪ್ಟೆಂಬರ್ 10 ರಂದು (ಮಂಗಳವಾರ) ನಗದು ಬಹುಮಾನ ವಿತರಿಸಿದೆ. * ಭಾರತಕ್ಕೆ ಮರಳಿದ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ಕ್ರೀಡಾ ಸಚಿವ ಮಾನ್ಸುಖ್ ಮಾಂಡವೀಯ ಅವರ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.* 2024 ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಮುಕ್ತಾಯಗೊಂಡ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ 75 ಲಕ್ಷ, ಬೆಳ್ಳಿ ಪದಕ ಗೆದ್ದವರಿಗೆ 50 ಲಕ್ಷ ಹಾಗು ಕಂಚಿನ ಪದಕ ಗೆದ್ದವರಿಗೆ 30 ಲಕ್ಷ ನಗದು ಬಹುಮಾನವನ್ನು ಕ್ರೀಡಾ ಸಚಿವ ಮನ್ನುಖ್ ಮಾಂಡವೀಯ ಅವರು ಸೆಪ್ಟೆಂಬರ್ 10 ರಂದು (ಮಂಗಳವಾರ) ಪ್ರದಾನ ಮಾಡಿದರು.* ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದ ಶೀತಲ್ ದೇವಿ ಹಾಗೂ ರಾಕೇಶ್ ಕುಮಾರ್‌ಗೆ ತಲಾ 22,5 ಲಕ್ಷ ಸಿಗಲಿದೆ ಎಂದರು.* ಪದಕ ವಿಜೇತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಚಿವರು ವಿಜೇತ ಕ್ರೀಡಾಪಟು ಗಳಿಗೆ ಬಹುಮಾನ ಮೊತ್ತದ ಚೆಕ್‌ಗಳನ್ನು ನೀಡಿದರು. * 2016ರಲ್ಲಿ ಕೇವಲ 4 ಪದಕ ಗೆದ್ದಿದ್ದ ಭಾರತ, 2020 ರಲ್ಲಿ ಭಾರತವು 19 ಪದಕ ಗೆದ್ದಿದ್ದು, ಈ ವರ್ಷ 2024 ರಲ್ಲಿ 29 ಪದಕ ಗೆದ್ದು 18 ನೇ ಸ್ಥಾನ ಪಡೆದಿದೆ. 2028ರ ಲಾಸ್‌ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕಗಳ ಸಾಧನೆ ಮಾಡಲು ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರ ಬೆಂಬಲ ನೀಡುತ್ತೇವೆ.