* ಭಾರತದ ಜಿಡಿಪಿ ಬೆಳವಣಿಗೆ ದರವು 2023- 24ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಶೇ 7.8ರಷ್ಟಾಗಿದೆ.* ಇದೇ ಆರ್ಥಿಕ ವರ್ಷದ ಇನ್ನುಳಿದ ಮೂರು ತ್ರೈಮಾಸಿಕಗಳಿಗೆ ಹೋಲಿಸಿದರೆ ಕೊನೇ ತ್ರೈಮಾಸಿಕದ ಬೆಳವಣಿಗೆ ದರವು ಕನಿಷ್ಠ ಪ್ರಮಾಣದ್ದಾಗಿದೆ' ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಹೇಳಿದೆ.* ‘ಕೊನೇ ತ್ರೈಮಾಸಿಕದಲ್ಲಿ ಕಡಿಮೆ ಬೆಳವಣಿಗೆ ದರ ದಾಖಲಾಗಿದ್ದರೂ, ದೇಶದ ವಾರ್ಷಿಕ ಬೆಳವಣಿಗೆಯು ಶೇ 8.2ರಷ್ಟು ದಾಖಲಾಗಿದೆ. ತಯಾರಿಕಾ ವಲಯವು ಹೆಚ್ಚಿನ ಬೆಳವಣಿಗೆ ತೋರಿದ್ದರಿಂದ ಈ ಅನುಕೂಲವಾಗಿದೆ.* 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗಾರಿಯಾ ಅವರು 2023-24ರ ಜಿಡಿಪಿ ಬೆಳವಣಿಗೆ ಶೇ.8.2ರಷ್ಟಿರುವುದು ಭಾರತಕ್ಕೆ ಉತ್ತಮ ಸುದ್ದಿಯಾಗಿದೆ ಎಂದು ಹೇಳಿದ್ದಾರೆ.