* ದೇಶದ ಭವಿಷ್ಯ ಯುವಶಕ್ತಿ ಈ ಅಂಶವನ್ನು ಮನಗಂಡಿರುವ ಸರ್ಕಾರ 2047ರವೇಳೆಗೆ ವಿಕಸಿತ ಭಾರತ ಸ್ಥಾಪಿಸುವ ಗುರಿ ಹೊಂದಿದೆ. ವಿವಿಧ ಇಲಾಖೆಯಡಿ ಲಭ್ಯವಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು.* ಮಹಿಳೆಯರಿಗೆ ಮುದ್ರಾ ಯೋಜನೆಯಡಿ 30 ಕೋಟಿ ಸಾಲ ನೀಡಲಾಗುತ್ತಿದೆ. ಕಳೆದ 10 ವರ್ಷದಲ್ಲಿ ಉನ್ನತ ಶಿಕ್ಷಣಕ್ಕೆ ಮಹಿಳಾ ದಾಖಲಾತಿ ಶೇ.28 ಏರಿಕೆ ಕಂಡಿದೆ. * ಇಡೀ ವಿಶ್ವದ ಚಿತ್ರ ತನ್ನತ್ತ ಸೆಳೆದ ಚಂದ್ರಯಾನ-3, ಆದಿತ್ಯ ಎಲ್-1 ನಂತಹ ಯೋಜನೆಗಳ ಯಶಸ್ಸನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಇಸ್ರೋದ ಮುಂಬರುವ ಯೋಜನೆಗಳಿಗೆ 13,042.75 ಕೋಟಿ ರೂ ಬಿಡುಗಡೆ ಮಾಡಿದೆ. * ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಾದ 7 ಐಐಟಿ, 16 ಐಐಐಟಿ , 7 ಐಐಎಂ, 15 ಏಮ್ಸ್ ಮತ್ತು 390 ವಿಶ್ವವಿದ್ಯಾಲಯಗಳನ್ನು 2014ರಿಂದೀಚೆಗೆ ಸ್ಥಾಪಿಸಲಾಗಿದೆ. ಈ ಬಾರಿ 3,000 ಹೊಸ ಐಟಿಐಗಳನ್ನು ಆರಂಭಿಸಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆಂದು 73,008.10 ಕೋಟಿ ರೂ ಮೀಸಲಿರಿಸಲಾಗಿದೆ. ಒಟ್ಟಾರೆ ಶಿಕ್ಷಣ 1,20,627.87 ಕೋಟಿ ರೂ. ಅನುದಾನ ಘೋಷಣೆಯಾಗಿದೆ. * ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ವಿದ್ಯುತ್ ಉಚಿತವಾಗಿ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, 1 ಕೋಟಿ ಮನೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಕೆ ಮಾಡಲಾಗುವುದು. ಇದರಿಂದ ಕುಟುಂಬಗಳಿಗೆ ವಾರ್ಷಿಕ 15 ರಿಂದ 18 ಸಾವಿರ ರೂ. ಉಳಿತಾಯವಾಗಲಿದೆ ಎಂದು ಸಚಿವರು ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. * ದೇಶದ ರಕ್ಷಣೆಗಾಗಿ ಶ್ರಮಿಸುವ ರಕ್ಷಣಾ ವಲಯಕ್ಕೆ ಕೇಂದ್ರ ಬಜೆಟ್‌ನಲ್ಲಿ 6.2 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬಜೆಟ್‌ನ ಒಟ್ಟು ಮೊತ್ತದಲ್ಲಿ ಶೇ.13 ರಕ್ಷಣಾ ವಲಯಕ್ಕೆ ಮೀಸಲಿರಸಲಾಗಿದೆ. ಮಿಲಿಟರಿ ಬಂಡವಾಳವಾಗಿ 1.72 ಲಕ್ಷ ಕೋಟಿ ರೂ. ರಕ್ಷಣಾ ವಲಯದ ಪಿಂಚಣಿಗೆ 1.4 . ಲಕ್ಷ ಕೋಟಿ ರೂ ಹಾಗೂ ರಕ್ಷಣಾ ಸೇವೆಗಳಿಗೆ 2.8 ಲಕ್ಷ ಕೋಟಿ ರೂ. ಎಂದು ವಿಭಜಿಸಲಾಗಿದೆ. * "ಬಲ್ಕ್ ಡ್ರಗ್‌ ಪಾರ್ಕ್‌ಗಳ' ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ₹ 1000 ಕೋಟಿ ಮೀಸಲಿಟ್ಟಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಇದಕ್ಕಾಗಿ ಕೇಂದ್ರ ಸ ₹900 ಮೀಸಲಿಟ್ಟಿತ್ತು. ಒಟ್ಟಾರೆ ಔಷಧೀಯ ಉದ್ಯಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ಬಾರಿ ₹1,300 ಕೋಟಿ ಒದಗಿಸಿದೆ. ದೇಶದಲ್ಲಿ ಜನರಿಗೆ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಗಳನ್ನು ಒದಗಿಸುವ ಜನೌಷಧಿ ಯೋಜನೆಗೆ ಈ ಬಾರಿ 285 ಕೋಟಿ ಒದಗಿಸಲಾಗಿದೆ.* ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ಮಧ್ಯಂತರ ಬಜೆಟ್‌ನಲ್ಲಿ ₹14,225 ಕೋಟಿ ನಿಗದಿ ಮಾಡಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ₹13 ಸಾವಿರ ಕೋಟಿ, ಅಂಗವಿಕಲರ ಸಬಲೀಕರಣ ಇಲಾಖೆಗೆ ₹1,225 ಕೋಟಿಯನ್ನು ನಿಗದಿ ಮಾಡಲಾಗಿದೆ.* 'ಮಕ್ಕಳಿಗೆ ಹಂಚಿಕೆ ಮಾಡಿರುವ ಮೊತ್ತವು ಕಳೆದ ಬಜೆಟ್‌ನಲ್ಲಿ ₹1,03,790.70ಕೋಟಿ ಹಂಚಿಕೆಯಾಗಿದ್ದರೆ, ಈ ಬಾರಿ ₹1,09,493 ಕೋಟಿ ಹಂಚಿಕೆ ಮಾಡಲಾಗಿದೆ. * 2024-25ನೇ ಹಣಕಾಸು ವರ್ಷದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ₹ 11.11 ಲಕ್ಷ ಕೋಟಿ ವ್ಯಯಿಸುವ ಭರವಸೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಅವರು  ನೀಡಿದ್ದಾರೆ. ರಸ್ತೆ, ಬಂದರು, ವಿಮಾನನಿಲ್ದಾಣಗಳ ಅಭಿವೃದ್ಧಿ ಒಳಗೊಂಡು ಮೂಲಸೌಕರ್ಯ ಕ್ಷೇತ್ರದಲ್ಲಿ ಒಟ್ಟು 11.11 ಲಕ್ಷ ಕೋಟಿ ವ್ಯಯಿಸಲಿದೆ.* ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಈ ಸಾಲಿನ ಬಜೆಟ್‌ನಲ್ಲಿ ₹13.000 ಕೋಟಿ ಅನುದಾನ ನೀಡಲಾಗಿದೆ. ಬುಡಕಟ್ಟು ಸಮುದಾಯದ ಮಕ್ಕಳಿಗಾಗಿ ಮೀಸಲಿರುವ ಏಕಲವ್ಯ ಮಾದರಿ ವಸತಿ ಶಾಲೆ (ಎಎಂಆರ್‌ಎಸ್) ನಿರ್ಮಾಣಕ್ಕಾಗಿ ₹6,399 ಕೋಟಿ, ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಗೆ ₹1,000 ಕೋಟಿ ಹಂಚಿಕೆ ಮಾಡಲಾಗಿದೆ.* ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ನೀಡುವ ಯೋಜನೆಗೆ 2024 25 ರ ಬಜೆಟ್ ನಲ್ಲಿ 86 ಸಾವಿರ ಕೋಟಿ  ಹಂಚಿಕೆಯಾಗಿದೆ. 2023-24ರ ಸಾಲಿನಲ್ಲಿ  ನರೇಗಾ ಯೋಜನೆಗೆ  60,000 ಕೋಟಿ  ಹಂಚಿಕೆ ಮಾಡಲಾಗಿತ್ತು , ಪರಿಷ್ಕೃತ ಅಂದಾಜಿನ ಪ್ರಕಾರ 86 ಸಾವಿರ ಕೋಟಿ ಏರಿಕೆಯಾಗಿದೆ.  * ನರೇಗಾ ಯೋಜನೆ ಅಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ನೂರು ದಿನಗಳ  ಉದ್ಯೋಗದ ನೀಡಲಾಗುತ್ತದೆ.* ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿ ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.* ಗ್ರಾಮೀಣ ಮಹಿಳೆಯರ ಬಹುಜೀವನೋಪಾಯ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಅನುಷ್ಠಾನಗೊಳಿಸಿರುವ ಲಖ್ ಪತಿ ದೀದಿ' ಯೋಜನೆಯಡಿ 3 ಕೋಟಿ ಮಹಿಳೆಯರಿಗೆ ತರಬೇತಿ ನೀಡುವ ಕುರಿತು ಮಧ್ಯಂತರ ಬಜೆಟ್ ನಲ್ಲಿ ಘೋಷಿಸಲಾಗಿದೆ.* 2024-25ರ ಕೇಂದ್ರ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 26,000 ಕೋಟಿ  ಅನುದಾನ ಹಂಚಿಕೆ ಮಾಡಲಾಗಿದೆ. ಸಕ್ಷಮ ಅಂಗನವಾಡಿ ಮತ್ತು ಪೋಷಣ 2.0 ಯೋಜನೆಗೆ  21,200 ಕೋಟಿ  ಹಂಚಿಕೆ ಮಾಡಲಾಗಿದೆ. ಮಹಿಳಾ ಸಬಲೀಕರಣದ ಮಿಷನ್ ಶಕ್ತಿ ಯೋಜನೆಗೆ  3,14,597 ಕೋಟಿ ಹಾಗೂ  ಮಕ್ಕಳ ರಕ್ಷಣೆಯ 'ಮಿಷನ್ ವಾಸ್ತಲ್ಯ' ಯೋಜನೆಗೆ 1,472 ಕೋಟಿ ಹಂಚಿಕೆ ಮಾಡಲಾಗಿದೆ.* ಇಲಾಖೆಗಳಿಗೆ ಹಣಕಾಸು ಅನುದಾನರಕ್ಷಣಾ ಇಲಾಖೆ - 6.02ರಸ್ತೆ ಸಾರಿಗೆ ಮತ್ತು ಹೆದ್ದಾರಿ - 2.78ರೈಲ್ವೆ ಇಲಾಖೆ - 2.55ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು - 2.13ಗೃಹ ಸಚಿವಾಲಯ - 2.03ಗ್ರಾಮೀಣ ಅಭಿವೃದ್ಧಿ - 1.77ರಾಸಾಯನಿಕ ಮತ್ತು ರಸಗೊಬ್ಬರ - 1.68ಸಂಪರ್ಕ ಇಲಾಖೆ - 1.37ಕೃಷಿ ಮತ್ತು ರೈತ ಕಲ್ಯಾಣ - 1.27