* ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ʼವಾರ್ಷಿಕ ಗೌರವ ಪ್ರಶಸ್ತಿʼ ಮತ್ತು ʼಸಾಹಿತ್ಯಶ್ರೀ ಪ್ರಶಸ್ತಿʼಗಳು ಪ್ರಕಟಗೊಂಡಿದ್ದು, ಐವರು ವಾರ್ಷಿಕ ಗೌರವ ಪ್ರಶಸ್ತಿ, 10 ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಅಕಾಡೆಮಿ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.* 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತಿಗಳಾದ ಸಿ. ವೀರಣ್ಣ (ಬೆಂಗಳೂರು), ಶ್ರೀರಾಮ ಇಟ್ಟಣ್ಣವರ (ಬಾಗಲಕೋಟೆ), ಜಾಣಗೆರೆ ವೆಂಕಟರಾಮಯ್ಯ (ತುಮಕೂರು), ಎ.ಎಂ. ಮದರಿ (ಕೊಪ್ಪಳ) ಹಾಗೂ ಸಬಿಹಾ ಭೂಮಿಗೌಡ (ಮಂಗಳೂರು) ಆಯ್ಕೆಯಾಗಿದ್ದಾರೆ.* ವಾರ್ಷಿಕ ಗೌರವ ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾರ್ಚ್ 24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.* 2023ನೇ ವರ್ಷದ 'ಸಾಹಿತ್ಯಶ್ರೀ' ಪ್ರಶಸ್ತಿ ಪುರಸ್ಕೃತರು : ಡಾ.ಎಂ.ಎಸ್.ಶೇಖರ್ - ಮೈಸೂರು, ಜಿ.ಎನ್.ಮೋಹನ್, ಬೆಂಗಳೂರು, ಡಾ.ಟಿ.ಎಸ್.ವಿವೇಕಾನಂದ – ತುಮಕೂರು, ಡಾ.ಜಯಶ್ರೀ ಕಂಬಾರ – ಬೆಳಗಾವಿ, ಪ್ರೊ.ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ – ಧಾರವಾಡ, ಡಾ.ಬಾಲಗುರುಮೂರ್ತಿ-ಕೋಲಾರ, ಪ್ರೊ.ಶಿವಗಂಗಾ ರುಮ್ಮ – ಕಲಬುರಗಿ, ಡಾ.ರೀಟಾ ರೀನಿ - ಬೆಂಗಳೂರು, ಡಾ.ಕಲೀಮ್ ಉಲ್ಲಾ- ಶಿವಮೊಗ್ಗ, ಡಾ.ವೆಂಕಟಗಿರಿ ದಳವಾಯಿ–ಬಳ್ಳಾರಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.* ಈ 'ಸಾಹಿತ್ಯಶ್ರೀ' ಪ್ರಶಸ್ತಿಯು 25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.* 2022ನೇ ವರ್ಷದ ಅಕಾಡೆಮಿಯ ದತ್ತಿ ಬಹುಮಾನ ಪುರಸ್ಕೃತರು: ಎಚ್.ಎಸ್.ಅನುಪಮಾ, ಫಾತಿಮಾ ರಲಿಯಾ, ಶಾರದಾ ವಿ. ಮೂರ್ತಿ, ವಿನಯಾ ನಂದಿಹಾಳ, ವಿಕ್ರಮ ವಿಸಾಜಿ, ಸುಶ್ರುತ್ ಜೆ.ಆರ್., ಅಕ್ಷತಾ ಕೃಷ್ಣಮೂರ್ತಿ, ಕೃಷ್ಣಮೂರ್ತಿ ಚಂದರ್, ಡಾ. ಶ್ರೀಧರ ಹೆಗಡೆ ಭದ್ರನ್ ಅವರು ದತ್ತಿ ಬಹುಮಾನಕ್ಕೆ ಭಾಜನರಾಗಿದ್ದಾರೆ.