* ಡಾ. ಬಿ.ಆರ್. ಅಂಬೇಡ್ಕರ್ ಸ್ಮರಣಾರ್ಥವಾಗಿ ಪ್ರತಿ ವರ್ಷ ನೀಡಲಾಗುವ ‘ಅಂಬೇಡ್ಕರ್ ಪ್ರಶಸ್ತಿ’ಗಾಗಿ 2023, 2024 ಮತ್ತು 2025ರ ಸಾಲಿನ ಪ್ರಶಸ್ತಿಗೆ ಒಟ್ಟು 15 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.* ಈ ಪ್ರಶಸ್ತಿಗೆ ತಲಾ ₹5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಮತ್ತು ಸ್ಮರಣಿಕ ಫಲಕ ನೀಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಆಯೋಜನೆಯಂತೆ, ಈ ಬಾರಿ ಪ್ರಶಸ್ತಿ ವಿತರಣಾ ಸಮಾರಂಭವು ಏಪ್ರಿಲ್ 14 ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆಯುವ ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯ ಅಂಗವಾಗಿ ನಡೆಯಲಿದೆ.ಪ್ರಶಸ್ತಿ ವಿಜೇತರ ವಿವರ:-2023: ಹರಿಹರಾನಂದ ಸ್ವಾಮಿ (ಮೈಸೂರು - ಸಮಾಜಸೇವೆ), ಇಂದೂಧರ ಹೊನ್ನಾಪುರ (ಬೆಂಗಳೂರು - ಪತ್ರಿಕೋದ್ಯಮ), ರುದ್ರಪ್ಪ ಹನಗವಾಡಿ (ದಾವಣಗೆರೆ - ಆಡಳಿತ), ಸೀತವ್ವ ಜೋಡಟ್ಟಿ (ಬೆಳಗಾವಿ - ದೇವದಾಸಿ ವಿಮೋಚನೆ), ಕೆ. ಪುಂಡಲೀಕರಾವ್ ಶೆಟ್ಟಿಬಾ (ಬೀದರ್ - ಸಮಾಜಸೇವೆ/ರಾಜಕೀಯ).- 2024: ಶ್ರೀಧರ ಕಲಿವೀರ (ಬೆಂಗಳೂರು - ಹೋರಾಟ), ಮಲ್ಲಾಜಮ್ಮ (ಮಂಡ್ಯ - ಸಮಾಜಸೇವೆ/ರಾಜಕೀಯ), ರಾಮದೇವ ರಾಕೆ (ಬೆಂಗಳೂರು - ಪತ್ರಿಕೋದ್ಯಮ), ವೈ.ಬಿ. ಹಿಮ್ಮಡಿ (ಬೆಳಗಾವಿ - ಸಾಹಿತ್ಯ/ಸಮಾಜಸೇವೆ), ಲಕ್ಷ್ಮೀಪತಿ ಕೋಲಾರ (ಕೋಲಾರ - ಸಾಹಿತ್ಯ/ಸಂಘಟನೆ).-2025: ದತ್ತಾತ್ರೇಯ ಇಕ್ಕಳಗಿ (ಕಲಬುರಗಿ - ಪ್ರಕಟಣಾ ಕ್ಷೇತ್ರ), ಮಾವಳ್ಳಿ ಶಂಕರ್ (ಬೆಂಗಳೂರು - ಹೋರಾಟ), ಎಫ್.ಎಚ್. ಜಕ್ಕಪ್ಪನವರ್ (ಧಾರವಾಡ - ಹೋರಾಟ), ಹೊನ್ನೂರು ಗೌರಮ್ಮ (ಚಾಮರಾಜನಗರ - ಜನಪದ ಕಲೆ), ಈರಪ್ಪ (ಹಾಸನ - ದಲಿತ ಹೋರಾಟ).