* 2023-24ನೇ ಸಾಲಿನಿಂದ 7ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಕ್ರಮದಲ್ಲಿ ಸಮಾಜ ವಿಜ್ಞಾನ ಪಠ್ಯದಲ್ಲಿ ರಾಷ್ಟ್ರೀಯ ಯುದ್ಧ ಸ್ಮಾರಕ ಎಂಬ ಪಾಠವನ್ನು ಅಳವಡಿಸಲಾಗಿದ್ದು, ಭಾರತೀಯ ಸೈನಿಕರ ಶೌರ್ಯ, ಬಲಿದಾನಗಳ ಕುರಿತು ತಿಳಿಸಲಾಗಿದೆ. * ಭಾರತೀಯ ಸೈನ್ಯದ ತ್ಯಾಗ ಬಲಿದಾನ ಹಾಗೂ ಯೋಧರ ಸಾಹಸಗಳ ಕುರಿತು ಮುಂದಿನ ಜನಾಂಗಕ್ಕೆ ಅರಿವು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಮುಂದಾಗಿದೆ.* ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಜಾಗೃತಿಗೊಳಿಸುವ ಮಹತ್ತರ ಗುರಿಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯ ಹೊಂದಿದೆ.