* ಫ್ರಾನ್ಸ್ನ ಲೆಯೋನ್ ಮಕ್ಷಾನ್ ಪುರುಷರ 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯನ್ನು 1:52.69 ಸೆ.ನಲ್ಲಿ ಪೂರ್ಣಗೊಳಿಸಿ ವಿಶ್ವದಾಖಲೆ ಸ್ಥಾಪಿಸಿದರು. ಈ ಮೂಲಕ 2011ರ ರಯಾನ್ ಲಾಕ್ಟಿಯ ದಾಖಲೆ ಮುರಿದರು.* ಮಕ್ಷಾನ್ ಈ ಹಿಂದೆ 400 ಮೀ. ಮೆಡ್ಲೆಯಲ್ಲಿ ಮೈಕೆಲ್ ಫೆಲ್ಪ್ಸ್ ದಾಖಲೆಯನ್ನೂ ಮುರಿಸಿದ್ದರು. ಈಗಿನ ದಾಖಲೆಗೆ ಅವರು ಉಲ್ಲಾಸ ವ್ಯಕ್ತಪಡಿಸಿದರು.* ಟ್ಯುನೀಷಿಯಾದ ಅಹ್ಮದ್ ಜಾವೊವದಿ ಪುರುಷರ 800 ಮೀ. ಫ್ರೀಸ್ಟೈಲ್ನಲ್ಲಿ 7:36.88 ಸೆ.ದಲ್ಲಿ ಗೆದ್ದು ಚಿನ್ನ ಪಡೆದರು.* ಆಸ್ಟ್ರೇಲಿಯಾದ ಒ’ಕ್ಯಾಲಗನ್ 200 ಮೀ. ಫ್ರೀಸ್ಟೈಲ್ನಲ್ಲಿ 1:54.48 ಸೆ. ಸಮಯದೊಂದಿಗೆ ಗೆದ್ದು ತಮ್ಮ ಹತ್ತನೇ ಚಾಂಪಿಯನ್ಷಿಪ್ ಚಿನ್ನ ಗಳಿಸಿದರು.* ಭಾರತದ ಶಾನ್ ಗಂಗೂಲಿ 200 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 2:05.40 ಸೆ.ನಲ್ಲಿ ಈಜಿ 38ನೇ ಸ್ಥಾನ ಪಡೆದರು.* ಚೀನಾದ 12 ವರ್ಷದ ಯು ಝಿದಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ, ವಿಶ್ವ ಅಕ್ವೆಟಿಕ್ಸ್ ಪ್ರವೇಶ ವಯೋಮಿತಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡುವ ಚಿಂತನೆ ನಡೆಸುತ್ತಿದೆ.