* ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 20 ವರ್ಷದ ಶಿವಂ ಲೋಹಕರೆ (ಮಹಾರಾಷ್ಟ್ರ, ಆರ್ಮಿ ರೆಡ್) ಅವರು 84.31 ಮೀ ಈಟಿಯನ್ನು ಎಸೆದು ಚಿನ್ನದ ಪದಕ ಜಯಿಸಿದರು.* ಇದರಿಂದ ಅವರು ನೀರಜ್ ಚೋಪ್ರಾ ಅವರ 83.80 ಮೀ ದಾಖಲೆಯನ್ನು ಮುರಿದರು. ಆದರೆ ಈ ಸಾಧನೆಯನ್ನು ವಿಶ್ವ ಅಥ್ಲೆಟಿಕ್ಸ್ ಮಾನ್ಯಗೊಳಿಸಲಿಲ್ಲ.* ಕರ್ನಾಟಕದ ಮಣಿಕಂಠ ಹೋಬಳಿದಾರ್ ಮೂರು ಚಿನ್ನದ ಪದಕಗಳನ್ನು (100 ಮೀ, 200 ಮೀ, 4x100 ಮೀ ರಿಲೇ) ಗೆದ್ದು ಗಮನ ಸೆಳೆದರು.* ಶಿವಂ ಅವರ ಸಾಧನೆಗೆ ನೀರಜ್ ಚೋಪ್ರಾ ಇನ್ಸ್ಟಾಗ್ರಾಮ್ನಲ್ಲಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸಿದರು.* ಸೆಪ್ಟೆಂಬರ್ 13-21 ರಂದು ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ 19 ಸದಸ್ಯರ ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ಸ್ಪರ್ಧಿಸಲಿದ್ದಾರೆ.