* ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಫಿಜಿ, ಕಾಮ್ರೆಸ್, ಮಡಗಾಸ್ಕರ್ ಮತ್ತು ಸೀಶೆಲ್ಸ್ ನಲ್ಲಿ 2 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸೌರ ಯೋಜನೆಯನ್ನು ಕಾರ್ಯಗತಗೊಳಿಸಲು ಅಂತರರಾಷ್ಟ್ರೀಯ ಸೌರ ಒಕ್ಕೂಟ (ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್) ದೊಂದಿಗೆ ಪ್ರಾಜೆಕ್ಟ್ ಅನುಷ್ಠಾನ ಒಪ್ಪಂದಕ್ಕೆ ಸಹಿ ಹಾಕಿದೆ.* ಕ್ವಾಡ್ ಕ್ಲೈಮೇಟ್ ವರ್ಕಿಂಗ್ ಗ್ರೂಪ್ ಉಪಕ್ರಮದ ಅಡಿಯಲ್ಲಿ ಈ ಇಂಡೋ-ಪೆಸಿಫಿಕ್ ದೇಶಗಳಲ್ಲಿ ಹೊಸ ಸೌರ ಯೋಜನೆಗಳಲ್ಲಿ 2 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಭಾರತ ಸಿದ್ಧವಾಗಿದೆ.* ಈ ದೇಶಗಳಲ್ಲಿ ಸೌರ ಯೋಜನೆಗಳು ಕೋಲ್ಡ್ ಸ್ಟೋರೇಜ್, ಆರೋಗ್ಯ ರಕ್ಷಣಾ ಸೌಲಭ್ಯಗಳ ಸೌರೀಕರಣದ ಕ್ಷೇತ್ರಗಳ ಮೇಲೆ ಕೇಂದ್ರೀಕತವಾಗಿವೆ ಮತ್ತು ಸೌರ ನೀರಿನ ಪಂಪ್ ವ್ಯವಸ್ಥೆಗಳು ಪರಿಗಣನೆಯಲ್ಲಿವೆ.* ಸೌರ ಯೋಜನೆಗಳ ಪರಿಗಣನೆಯಲ್ಲಿರುವ ದೇಶಗಳು ಕಷಿ ಉತ್ಪನ್ನಗಳ ಹಾಳಾಗುವಿಕೆ, ಆರೋಗ್ಯ ಕೇಂದ್ರಗಳಲ್ಲಿ ವಿಶ್ವಾಸಾರ್ಹವಲ್ಲದ ವಿದ್ಯುತ್ ಪೂರೈಕೆ ಮತ್ತು ಗ್ರಿಡ್ ವಿದ್ಯುತ್ ಸರಬರಾಜು ಅಥವಾ ಸೌರ ಮಿನಿ ಗ್ರಿಡ್ಗಳಿಲ್ಲದ ದೂರದ ಪ್ರದೇಶಗಳಲ್ಲಿ ನೀರಾವರಿ ಉದ್ದೇಶಗಳಿಗೆ ಸಂಬಂಧಿಸಿದ ಶಕ್ತಿಯ ಸಮಸ್ಯೆಗಳನ್ನು ಹೊಂದಿವೆ ಎಂದು ಪ್ರಕಟಣೆ ತಿಳಿಸಿದೆ.