* ಮೂರು ಬಾರಿ ಸಂಸದರಾಗಿದ್ದ ಎನ್ ಡಿಎ ಮೈತ್ರಿಕೂಟದ ಓಂ ಬಿರ್ಲಾ ಅವರು 18ನೇ ಲೋಕಸಭೆಯ ಸ್ಪೀಕರ್ ಆಗಿ ಜೂನ್ 26 ರಂದು (ಬುಧವಾರ) ನಡೆದ ಚುನಾವಣೆಯಲ್ಲಿ ಇನಿಯಾ ಒಕ್ಕೂಟದ  ಎಂಟು ಬಾರಿ ಸಂಸದರಾಗಿದ್ದ ಕೇರಳದ ಮಾವೇಲಿಕರ ಕೋಡಿಕುನ್ನಿಲ್ ಸುರೇಶ್ ಅವರನ್ನು ಸೋಲಿಸಿ ಸ್ಪೀಕರ್ ಆಗಿ ಧ್ವನಿ ಮತದಿಂದ ಮರು ಆಯ್ಕೆಗೊಂಡಿದ್ದಾರೆ.* 1952, 1967 ಮತ್ತು 1976 ರ ನಂತರ ಇದು ನಾಲ್ಕನೇ ಬಾರಿಗೆ ಚುನಾವಣೆಯ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಬಿರ್ಲಾ ಅವರು ರಾಜಸ್ಥಾನದ ಕೋಟಾ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು.*  ಧ್ವನಿ ಮತದ ಸಮಯದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಓಂ ಬಿರ್ಲಾ ಅವರಿಗೆ ಮತ ಹಾಕಿದ್ದು, ಏನ್ ಡಿಎ ಲೋಕಸಭೆಯಲ್ಲಿ ಬಹುಮತವನ್ನು ಹೊಂದಿದ್ದು 297 ಸದಸ್ಯರನ್ನು ಹೊಂದಿದೆ.* ಲೋಕಸಭಾ ಸ್ಪೀಕರ್ ಅಭ್ಯರ್ಥಿಯಾಗಿದ್ದ ಕೆ. ಸುರೇಶ ಅವರು ಇಂಡಿಯಾ ಮೈತ್ರಿಕೂಟದ 234 ಸಂಸದರು ಬೆಂಬಲಿಸಿದರು.* ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಈವರೆಗೆ 3 ಬಾರಿ ಮಾತ್ರ ಚುನಾವಣೆಗಳು ನಡೆದಿದೆ, ಇದು ನಲಕನೇ ಬಾರಿ ಚುನಾವಣೆಯಾಗಿದೆ. 1952ರಲ್ಲಿ ಜಿ.ವಿ.ಮಾವಲಂಕರ್ ಹಾಗೂ ಶಂಕರ್ ಶಾಂತಾರಾಮ್‌ ಅವರು ಸ್ಪರ್ಧೆ ಮಾಡಿದ್ದರಿಂದ ಚುನಾವಣೆ ಆಗಿತ್ತು. ಮಾವಲಂಕರ್‌ ಅವರು 394 ಮತಗಳನ್ನು ಪಡೆದು ವಿಜೇತರಾದರೆ, ಶಾಂತಾರಾಮ್‌ ಅವರು ಕೇವಲ 55 ಮತಗಳನ್ನು ಗಳಿಸಿದ್ದರು. ತುರ್ತು ಪರಿಸ್ಥಿತಿಯ ವೇಳೆ ಅಂದರೆ 1976ರಲ್ಲಿ ಬಲಿರಾಮ್‌ ಭಗತ್‌ ಹಾಗೂ ಜಗನ್ನಾಥ ರಾವ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಭಗತ್‌ ಅವರು 344 ಮತಗಳೊಂದಿಗೆ ಆಯ್ಕೆಯಾಗಿದ್ದರೆ, ಜಗನ್ನಾಥರಾವ್‌ ಅವರು 58 ಮತ ಪಡೆದು ಪರಾಜಿತರಾಗಿದ್ದರು.