Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
17ನೇ ಬೆಂಗಳೂರು ಚಲನಚಿತ್ರೋತ್ಸವ 2026: ‘ವನ್ಯಾ’–‘ಲಾಸ್ಟ್ ಲ್ಯಾಂಡ್’ಗೆ ಉನ್ನತ ಗೌರವ
Authored by:
Akshata Halli
Date:
7 ಫೆಬ್ರುವರಿ 2026
➤
ಬೆಂಗಳೂರು:
ಜಾಗತಿಕ ಸಿನೆಮಾ ಪ್ರಿಯರ ಕಣ್ಣು ಸೆಳೆದಿದ್ದ '17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ'ಕ್ಕೆ (BIFFes) ಅದ್ಧೂರಿ ತೆರೆ ಬಿದ್ದಿದೆ. ಬೆಂಗಳೂರಿನ ಲುಲು ಮಾಲ್ನಲ್ಲಿ ಶುಕ್ರವಾರ (06-02-2026) ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಭಾಗಗಳ ಅತ್ಯುತ್ತಮ ಚಿತ್ರಗಳಿಗೆ ಪ್ರಶಸ್ತಿ ಘೋಷಿಸಲಾಯಿತು.ಜಪಾನ್ನ
'ಲಾಸ್ಟ್ ಲ್ಯಾಂಡ್'
ಏಷ್ಯನ್ ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದರೆ, ಕನ್ನಡ ಸ್ಪರ್ಧಾ ವಿಭಾಗದಲ್ಲಿ
'ವನ್ಯಾ'
ಚಿತ್ರ ಪ್ರಥಮ ಬಹುಮಾನ ಗೆದ್ದಿದೆ.
➤
ಪ್ರಶಸ್ತಿ ವಿಜೇತರ ವಿವರಗಳು:
I. ಏಷ್ಯನ್ ಚಿತ್ರಗಳ ಸ್ಪರ್ಧಾ ವಿಭಾಗ:
ಅತ್ಯುತ್ತಮ ಚಿತ್ರ: ಲಾಸ್ಟ್ ಲ್ಯಾಂಡ್ (ಜಪಾನ್)
ದ್ವಿತೀಯ: ಶೇಪ್ ಆಫ್ ಮೋಮೋ (ಭಾರತ)
ತೃತೀಯ: ದಿ ಡೀಪೆಸ್ಟ್ ಸ್ಪೇಸ್ ಇನ್ ಯುಎಸ್ (ಜಪಾನ್)
ವಿಶೇಷ ಮೆಚ್ಚುಗೆ: ರಿಪಬ್ಲಿಕ್ ಆಫ್ ಪಿಪೊಲಿಪಿನಾಸ್ (ಫಿಲಿಪ್ಪಿನ್ಸ್)
I
I
ಚಿತ್ರಭಾರತಿ (ಭಾರತೀಯ ಸಿನೆಮಾ) ವಿಭಾಗ:
ಅತ್ಯುತ್ತಮ ಚಿತ್ರ: ಸಬರ್ ಬೊಂದಾ (ಮರಾಠಿ)
ದ್ವಿತೀಯ: ಮೋಹಂ (ಮಲಯಾಳಂ)
ತೃತೀಯ: ಕಾಡು (ಮಲಯಾಳಂ)
ಫಿಪ್ರೆಸ್ಕಿ (FIPRESCI) ಪ್ರಶಸ್ತಿ: ಗೊಂದಾಳ್ (ಮರಾಠಿ)
ವಿಶೇಷ ಮೆಚ್ಚುಗೆ: ಸರ್ಕೀಟ್ (ಮಲಯಾಳಂ)
III ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗ:
ಅತ್ಯುತ್ತಮ ಚಿತ್ರ (ಪ್ರಥಮ): ವನ್ಯಾ
ದ್ವಿತೀಯ: ನಮ್ ಸಾಲಿ
ತೃತೀಯ: ರಾವಣ ರಾಜ್ಯದಲ್ಲಿ ನವದಂಪತಿಗಳು
ನೆಟ್ಪ್ಯಾಕ್ (NETPAC) ಪ್ರಶಸ್ತಿ: ಹಕ್ಕಿಗಾಗಿ
ವಿಶೇಷ ಮೆಚ್ಚುಗೆ: ಮೃಗತೃಷ್ಟ ಮತ್ತು ಫೋರ್ ಬೈ ಫೋರ್
ನಾದಬ್ರಹ್ಮ ಹಂಸಲೇಖ ಅವರಿಗೆ 'ಜೀವಮಾನ ಸಾಧನೆ' ಗೌರವ
➤
ಪ್ರಶಸ್ತಿ ಮೊತ್ತ:
ಅತ್ಯುತ್ತಮ ಚಿತ್ರ: ₹10 ಲಕ್ಷ ನಗದು ಮತ್ತು ಪಾರಿತೋಷಕ.
ದ್ವಿತೀಯ ಅತ್ಯುತ್ತಮ ಚಿತ್ರ: ₹5 ಲಕ್ಷ ನಗದು.
ತೃತೀಯ ಅತ್ಯುತ್ತಮ ಚಿತ್ರ: ₹2 ಲಕ್ಷ ನಗದು.
➤ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಆರೋಗ್ಯ ಸಚಿವ
ದಿನೇಶ್ ಗುಂಡೂರಾವ್
ಮಾತನಾಡಿ, "ಸಿನೆಮಾ ಕೇವಲ ಮನರಂಜನೆಯಲ್ಲ, ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮ. ಕಲೆ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ನಿರ್ಭೀತ ಸೃಜನಶೀಲತೆ ಅಗತ್ಯ. ಚಿತ್ರರಂಗದವರು ಯಾವುದೇ ಒತ್ತಡಕ್ಕೆ ಮಣಿಯದೆ ಸಮಾಜದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಮಾಡಬೇಕು," ಎಂದು ಕರೆ ನೀಡಿದರು.
➤ ಸಮಾರೋಪ ಸಮಾರಂಭದಲ್ಲಿ ನಟ ಪ್ರಕಾಶ್ ರೈ, ವಾರ್ತಾ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಕಲಾತ್ಮಕ ನಿರ್ದೇಶಕ ಮುರಳಿ ಪಿ.ಬಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Take Quiz
Loading...