* ನವದಿಲ್ಲಿಯಲ್ಲಿ ಇತ್ತೀಚೆಗಷ್ಟೇ 16ನೇ ಗೃಹ(Green Rating for Integrated Habitat Assessment) ಶೃಂಗಸಭೆ ನಡೆಯಿತು. ಡಿಸೆಂಬರ್ 4–5, 2024 ರಂದು ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ ಆಯೋಜಿಸಲಾಗಿತ್ತು.* "ಬಿಲ್ಟ್ ಎನ್ವಿರಾನ್ಮೆಂಟ್ನಲ್ಲಿ ಹವಾಮಾನ ಕ್ರಿಯೆಯನ್ನು ವೇಗಗೊಳಿಸುವುದು" ಎಂಬುವುದು ಈ ವರ್ಷದ ಶೃಂಗಸಭೆಯ ಥೀಮ್ ಆಗಿದೆ. * ಸಭೆಯಲ್ಲಿ ಹವಾಮಾನ ಬದಲಾವಣೆ ತಡೆಗಟ್ಟುವಿಕೆ ಸೇರಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಇದರಲ್ಲಿ ಉದ್ಯಮ ನಾಯಕರು, ನೀತಿ ನಿರೂಪಕರು ಹಾಗೂ ತಜ್ಞರು ಭಾಗಿಯಾಗಿದ್ದರು.* ಸುಸ್ಥಿರ ಪರಿಸರ ನಿರ್ಮಾಣ, ಆರ್ಥಿಕ. ಬೆಳವಣಿಗೆ, 2030ರ ವೇಳೆಗೆ ಜಾಗತಿಕ ಹವಾಮಾನ ಗುರಿಗಳನ್ನು ಪೂರೈಸುವುದು, ಕಟ್ಟಡಗಳಿಂದ ಹೊರಸೂಸುವ ಇಂಗಾಲವನ್ನು ಕಡಿಮೆ ಮಾಡುವುದು ಈ ಶೃಂಗಸಭೆಯ ಪ್ರಾಥಮಿಕ ಉದ್ದೇಶವಾಗಿದೆ.* ಗೃಹ ಶೃಂಗಸಭೆಯು 'ವೀಕ್ಷಿತ್ ಭಾರತ -2047'ಕ್ಕೆ ಹೊಂದಿಕೆಯಾಗಲಿದೆ. 2007ರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಗೃಹವನ್ನು ಸ್ಥಾಪಿಸತು. ಇದು ಕಟ್ಟಡಗಳ ಪರಿಸರ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಹವಾಮಾನ ಕ್ರಿಯಾ ಯೋಜನೆಗಳಲ್ಲಿ ಇದು ಹೆಚ್ಚಿನ ಮನ್ನಣೆ ಗಳಿಸಿದೆ.* GRIHA ಒಂದು ರೇಟಿಂಗ್ ವ್ಯವಸ್ಥೆಯಾಗಿದ್ದು ಅದು ಕಟ್ಟಡಗಳ ಸಂಪೂರ್ಣ ಜೀವನ ಚಕ್ರದಲ್ಲಿ ಪರಿಸರದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತದೆ. ಈ ವ್ಯವಸ್ಥೆಯನ್ನು 2007 ರಲ್ಲಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಮತ್ತು TERI ಅಭಿವೃದ್ಧಿಪಡಿಸಿದೆ.