* 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ನಿಷೇಧಗೊಳಿಸುವ ಮಸೂದೆಗೆ ಆಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆಯು ಅಂಗೀಕರಿಸಿದೆ. ಇದು ವಿಶ್ವದ ಮೊದಲ ಕಾನೂನು ಆಗಲಿದೆ. * ಆನ್ಲೈನ್ ಸುರಕ್ಷತಾ ತಿದ್ದುಪಡಿ (ಸಾಮಾಜಿಕ ಮಾಧ್ಯಮ ಕನಿಷ್ಠ ವಯಸ್ಸು) (Online Safety Amendment (Social Media Minimum Age) Bill 2024 ಮಸೂದೆಯು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳನ್ನು 16 ವರ್ಷದೊಳಗಿನ ಬಳಕೆದಾರರಿಗೆ ತಮ್ಮ ಸೇವೆಗಳನ್ನು ಪ್ರವೇಶಿಸಲು ಅನುಮತಿಸುವುದನ್ನು ನಿಷೇಧಿಸುತ್ತದೆ. * ಪ್ರಮುಖ ಜಾಲತಾಣಗಳಾದ ಟಿಕ್ಟಾಕ್, ಫೇಸ್ಬುಕ್, ಸ್ನ್ಯಾಪ್ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್ಸ್ಟಾಗ್ರಾಮ್ ಮುಂತಾದವುಗಳು ತಮ್ಮ ಜಾಲತಾಣದಲ್ಲಿ ಚಿಕ್ಕ ಮಕ್ಕಳು ಖಾತೆಗಳನ್ನು ಹೊಂದುವುದನ್ನು ನಿಷೇಧಿಸುವುದು ಕಡ್ಡಾಯವಾಗಿದೆ. ಇದಕ್ಕೆ ತಪ್ಪಿದ ಜಾಲತಾಣಗಳಿಗೆ 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ಗಳವರೆಗೆ ($ 33 ಮಿಲಿಯನ್) ದಂಡ ತೆತ್ತಾಬೇಕಿದೆ. ಅಂದಾಜು ₹ 270 ಕೋಟಿಗೂ ಹೆಚ್ಚು ದಂಡ ವಿಧಿಸಲು ಕಾನೂನು ಅನುಮತಿಸುತ್ತದೆ.* ಒಂದು ವೇಳೆ 16 ವರ್ಷದ ಒಳಗಿನ ಮಕ್ಕಳು ಜಾಲತಾಣಗಳಲ್ಲಿ ಖಾತೆ ತೆರೆದರೆ ಸಂಬಂಧಿಸಿದ ವೇದಿಕೆಗಳೇ ಹೊಣೆಯಾಗುತ್ತವೆ ಎಂಬ ಅಂಶ ಕಾನೂನಿನಲ್ಲಿದೆ. ಸೆನೆಟ್ನಲ್ಲಿ ಮಸೂದೆ ಪರವಾಗಿ 34 ಮತ್ತು ವಿರುದ್ಧವಾಗಿ 19 ಮತಗಳು ಬಂದವು. ಜನಪ್ರತಿನಿಧಿಗಳ ಸಭೆಯಲ್ಲಿ ಮಸೂದೆ ಪರವಾಗಿ 102 ಮತ್ತು ವಿರುದ್ಧವಾಗಿ 13 ಮತಗಳು ಬಂದವು. * ಎರಡೂ ಸದನಗಳಲ್ಲಿ ಮಸೂದೆಗೆ ಒಪ್ಪಿಗೆ ದೊರೆತಿದ್ದು, ಇದು ಜನವರಿ 1ರಿಂದ ಕಾನೂನಾಗಿ ಜಾರಿಗೆ ಬರಲಿದೆ. ಮಕ್ಕಳು ಖಾತೆ ಹೊಂದುವುದನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕಾರ್ಯಗತಗೊಳಿಸಲು ಜಾಲತಾಣಗಳಿಗೆ 1 ವರ್ಷ ಸಮಯವಕಾಶವನ್ನು ನೀಡಲಾಗಿದೆ.