* ಭಾರತದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇಕಡಾ 74 ರಿಂದ 2023-24ರಲ್ಲಿ ಶೇಕಡಾ 80.9 ಕ್ಕೆ ಏರಿಕೆಯಾಗಿದೆ. ಆದರೆ ಪ್ರತಿಯೊಬ್ಬ ನಾಗರಿಕನಿಗೂ ಸಾಕ್ಷರತೆ ಜೀವಂತ ವಾಸ್ತವವಾದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯವೆಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.* ಉಲ್ಲಾಸ್–ನವ ಭಾರತ್ ಸಾಕ್ಷರತಾ ಕಾರ್ಯಕ್ರಮದಡಿ 3 ಕೋಟಿಗೂ ಹೆಚ್ಚು ಕಲಿಯುವವರು ಮತ್ತು 42 ಲಕ್ಷ ಸ್ವಯಂಸೇವಕರು ಸೇರಿಕೊಂಡಿದ್ದಾರೆ.* 1.83 ಕೋಟಿ ಜನರು ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಶಾಸ್ತ್ರ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು, ಶೇಕಡಾ 90 ಯಶಸ್ಸು ಕಂಡಿದೆ. ಈಗ 26 ಭಾರತೀಯ ಭಾಷೆಗಳಲ್ಲಿ ಕಲಿಕಾ ಸಾಮಗ್ರಿಗಳು ಲಭ್ಯವಿದೆ.* ಸಂಪೂರ್ಣ ಸಾಕ್ಷರತೆ ಸಾಧಿಸಿದ ರಾಜ್ಯಗಳು : ಲಡಾಖ್, ಮಿಜೋರಾಂ, ಗೋವಾ, ತ್ರಿಪುರ ಮತ್ತು ಹಿಮಾಚಲ ಪ್ರದೇಶಗಳು ಸಂಪೂರ್ಣ ಸಾಕ್ಷರತೆಯನ್ನು ಸಾಧಿಸಿವೆ. ಲಡಾಖ್ ಸಂಪೂರ್ಣ ಸಾಕ್ಷರತೆಯನ್ನು ಗಳಿಸಿದ ಮೊದಲ ಕೇಂದ್ರಾಡಳಿತ ಪ್ರದೇಶ.* ಡಿಜಿಟಲ್ ತಂತ್ರಜ್ಞಾನ ಓದು, ಬರಹ, ಸಂಖ್ಯಾಶಾಸ್ತ್ರ ಮತ್ತು ಜೀವನ ಕೌಶಲ್ಯಗಳನ್ನು ವಿಸ್ತರಿಸಲು ಪ್ರಮುಖ ಪಾತ್ರ ವಹಿಸುತ್ತಿದೆ.* ಶಿಕ್ಷಣ ರಾಜ್ಯ ಸಚಿವ ಜಯಂತ್ ಚೌಧರಿ, ಭಾರತವು ಬಲಿಷ್ಠ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಿಂದ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಿದರು. ಡಿಜಿಟಲ್ ನಾವೀನ್ಯತೆಗಳು ದಶಕದಲ್ಲೇ ಐವತ್ತು ವರ್ಷದ ಪ್ರಗತಿಯನ್ನು ಸಾಧ್ಯವಾಗಿಸಿವೆ.