* ವಿಶ್ವ ಮೂತ್ರಪಿಂಡ ದಿನವು 2006 ರಿಂದ ಪ್ರತಿ ವರ್ಷ ಮಾರ್ಚ್ ತಿಂಗಳ 2 ನೇ ಗುರುವಾರದಂದು ಆಚರಿಸಲಾಗುವ ಜಾಗತಿಕ ಆರೋಗ್ಯ ರಕ್ಷಣಾ ಕಾರ್ಯಕ್ರಮವಾಗಿದೆ.* ವಿಶ್ವ ಮೂತ್ರಪಿಂಡ ದಿನವನ್ನು 2025ರ ಮಾರ್ಚ್ 13ರಂದು ಆಚರಿಸಲಾಗುತ್ತಿದೆ. ಇದು ಮೂತ್ರಪಿಂಡ ಕಾಯಿಲೆಗಳಿಂದ ಬಳಲುವವರನ್ನು ಒಟ್ಟುಗೂಡಿಸಿ, ಮೂತ್ರಪಿಂಡದ ಆರೋಗ್ಯದ ಮಹತ್ವವನ್ನು ಜಾಗೃತಿಪಡಿಸುವುದು ಹಾಗೂ ಜನರಿಗೆ ಶಿಕ್ಷಣ ನೀಡುವುದನ್ನು ಉದ್ದೇಶಿಸಿದೆ.* 2025ರ ವಿಶ್ವ ಮೂತ್ರಪಿಂಡ ದಿನದ ಥೀಮ್:"ನಿಮ್ಮ ಮೂತ್ರಪಿಂಡಗಳು ಸರಿಯಾಗಿವೆಯೇ? ಮೊದಲೇ ಪತ್ತೆ ಮಾಡಿ, ಮೂತ್ರಪಿಂಡದ ಆರೋಗ್ಯವನ್ನು ರಕ್ಷಿಸಿ". ಈ ಥೀಮ್, ಮೂತ್ರಪಿಂಡದ ಕಾಯಿಲೆಗಳ ಆರಂಭಿಕ ಪತ್ತೆ, ತಡೆಗಟ್ಟುವ ಕ್ರಮಗಳು ಮತ್ತು ದೀರ್ಘಕಾಲೀನ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡುತ್ತದೆ.* ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಜಾಗತಿಕ ಜನಸಂಖ್ಯೆಯ 10% ಗೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ವೃದ್ಧರು ಮತ್ತು ಮಧುಮೇಹಿಗಳಲ್ಲಿ ಹೆಚ್ಚು ಕಾಣಸಿಗುತ್ತದೆ.* ಭಾರತದಲ್ಲಿ ಈ ಕಾಯಿಲೆಯ ಹರಡುವಿಕೆ 10 ಲಕ್ಷ ಜನರಿಗೆ 800 ರಷ್ಟು ಇದ್ದು, ಕೊನೆಯ ಹಂತದ ಸ್ಥಿತಿ (ESRD) 150–200 ರಷ್ಟಿದೆ. ಮಧುಮೇಹ ನೆಫ್ರೋಪತಿ ಪ್ರಮುಖ ಕಾರಣವಾಗಿದ್ದು, ಜನಸಂಖ್ಯೆಯ ವಯಸ್ಸು, ಮಧುಮೇಹ, ಮತ್ತು ರಕ್ತದೊತ್ತಡ ಇದರ ಪಸರಕ್ಕೆ ಸಹಾಯ ಮಾಡುತ್ತವೆ.* ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ತಡೆಗಟ್ಟುವ ಪ್ರಮುಖ ಸಲಹೆಗಳು- ದೈಹಿಕವಾಗಿ ಸದೃಢರಾಗಿರಿ ಮತ್ತು ಜಡ ಜೀವನಶೈಲಿಯನ್ನು ತಪ್ಪಿಸಿ. - ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ.- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಿ ಮತ್ತು ನಿರ್ವಹಿಸಿ - ರಕ್ತದೊತ್ತಡದ ಮಟ್ಟವನ್ನು ಪರಿಶೀಲಿಸಿ ಮತ್ತು ನಿರ್ವಹಿಸಿ - ಸೂಕ್ತ ದ್ರವಗಳನ್ನು ಕುಡಿಯಿರಿ (8 ಕಪ್, ದಿನಕ್ಕೆ ಸುಮಾರು 2 ಲೀಟರ್)- ತಂಬಾಕು ಸೇವನೆಯಿಂದ ದೂರವಿರುವುದು - ಸ್ಟಿರಾಯ್ಡ್ ಅಲ್ಲದ ಉರಿಯೂತ ನಿವಾರಕ (NSAIDS) ಗಳನ್ನು ನಿಯಮಿತವಾಗಿ ಸೇವಿಸುವುದನ್ನು ತಪ್ಪಿಸಿ.