* ಬೆಂಗಳೂರು ಮೆಟ್ರೋ ಮೂರನೇ ಹಂತದಲ್ಲಿ ಹೊಸಹಳ್ಳಿ–ಕಡಬಗೆರೆ ಬೂದು ಮಾರ್ಗ (ಗ್ರೇ ಲೈನ್) ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದೆ. 12.5 ಕಿ.ಮೀ ಉದ್ದದ ಈ ಮಾರ್ಗ, ಬೆಂಗಳೂರಿನ ಅತಿ ಚಿಕ್ಕ ಮೆಟ್ರೋ ಮಾರ್ಗವಾಗಿದ್ದು, ಮಾಗಡಿ ರಸ್ತೆ ಮತ್ತು ಸುತ್ತಮುತ್ತಲ ಬಡಾವಣೆಗಳಿಗೆ ವೇಗದ ಸಂಪರ್ಕ ಕಲ್ಪಿಸಲಿದೆ.* ಈ ಮಾರ್ಗವು ಹೊಸಹಳ್ಳಿ–ಕಡಬಗೆರೆ ನಡುವೆ ಕಾಮಾಕ್ಷಿಪಾಳ್ಯ, ಸುಮನಹಳ್ಳಿ, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಕಾಮತ್ ಲೇಔಟ್ ಮೂಲಕ ಹಾದುಹೋಗಲಿದೆ.* ಹೊಸಹಳ್ಳಿ (ನೇರಳೆ ಮಾರ್ಗ) ಮತ್ತು ಸುಮನಹಳ್ಳಿ ಕ್ರಾಸ್ (ಕಿತ್ತಳೆ ಮಾರ್ಗ) ಇಂಟರ್ಚೇಂಜ್ ನಿಲ್ದಾಣಗಳಾಗಿವೆ.* ಯೋಜನೆಯ ಒಟ್ಟು ವೆಚ್ಚ 3540 ಕೋಟಿ ರೂ., ಇದರಲ್ಲಿ 565 ಕೋಟಿ ಭೂಸ್ವಾಧೀನಕ್ಕೆ, 950 ಕೋಟಿ ಫೌಂಡೇಶನ್ ಬಿಲ್ಡಿಂಗ್ಗೆ ಮೀಸಲಾಗಿವೆ. 2032ರಲ್ಲಿ ದಿನಕ್ಕೆ 1.8 ಲಕ್ಷ ಪ್ರಯಾಣಿಕರ ಸಂಚಾರ, 2051ರಲ್ಲಿ 2.6 ಲಕ್ಷ ಪ್ರಯಾಣಿಕರ ಸಂಚಾರ ನಿರೀಕ್ಷಿಸಲಾಗಿದೆ.* ಪ್ರಸ್ತುತ ಭೂಸ್ವಾಧೀನ ಕಾರ್ಯ ನಡೆಯುತ್ತಿದ್ದು, 2032ರ ವೇಳೆಗೆ ಕಾರ್ಯಾರಂಭ ಸಾಧ್ಯ. ಇದು ಮಾಗಡಿ ರಸ್ತೆ, ಹೊರ ವರ್ತುಲ ರಸ್ತೆ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಸೇರಿದಂತೆ ಪಶ್ಚಿಮ–ವಾಯವ್ಯ ಭಾಗದ ಅಭಿವೃದ್ಧಿಗೆ ಸಹಾಯ ಮಾಡಲಿದೆ.