* ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯ ಅವರು ಅಹಮದಾಬಾದ್ನಲ್ಲಿ ನಡೆಯಲಿರುವ 11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ (ಸೆಪ್ಟೆಂಬರ್ 28 – ಅಕ್ಟೋಬರ್ 11) ಗೆ ಸಂಬಂಧಿಸಿದಂತೆ ‘ಜಲವೀರ’ ಮಸ್ಕಾಟ್ ಮತ್ತು ಲೋಗೋವನ್ನು ಬಿಡುಗಡೆ ಮಾಡಿದರು.* ಈ ಸ್ಪರ್ಧೆ 2026ರ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತಾ ಪಂದ್ಯವಾಗಿದ್ದು, ಭಾರತೀಯ ಈಜು ಫೆಡರೇಶನ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆದಿತು.* ಚಾಂಪಿಯನ್ಶಿಪ್ ಹೊಸದಾಗಿ ನಿರ್ಮಿಸಲಾದ ಓಲಿಂಪಿಕ್ ಮಾನದಂಡಗಳ ವೀರ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ.* 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ 1000 ಕ್ಕೂ ಹೆಚ್ಚು ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ.* ಮನ್ಸುಖ್ ಮಾಂಡವಿಯ ಅವರು ಈ ಚಾಂಪಿಯನ್ಶಿಪ್ ಭಾರತೀಯ ಅಕ್ವಾಟಿಕ್ಸ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಲಿದ್ದು, ಭಾರತೀಯ ಈಜುಗಾರರಿಗೆ ಸ್ವದೇಶಿ ಪ್ರೇಕ್ಷಕರ ಮುಂದೆ ತಮ್ಮ ಪ್ರತಿಭೆ ತೋರಿಸಲು ಇದು ದೊಡ್ಡ ಅವಕಾಶ ಎಂದು ಹೇಳಿದರು.