* ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್ 10ರವರೆಗೆ 11.25 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.* ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ 5.98 ಲಕ್ಷ ಕೋಟಿ ರೂ. ಕಾರ್ಪೊರೇಟ್ ತೆರಿಗೆ ಸಂಗ್ರಹ 4.94 ಲಕ್ಷ ಕೋಟಿ ರೂ. ಆಗಿದೆ.* 30,630 ಕೋಟಿ ರೂ. ಷೇರು ವಹಿವಾಟು ತೆರಿಗೆ (ಎಸ್‌ಟಿ) 2,150 ಕೋಟಿ ರೂ. ಇತರೆ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಹಾಲ್ಗೊಳ್ಳಲಿದ್ದಾರೆ ಅವಧಿಯಲ್ಲಿ 9.15 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಶೇ.18.3ರಷ್ಟು ಏರಿಕೆಯಾಗಿದೆ.* ಒಟ್ಟು 2.31 ಲಕ್ಷ ಕೋಟಿ ರೂ. ತೆರಿಗೆ ಮರುಪಾವತಿ ಮಾಡಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮರುಪಾವತಿಯಲ್ಲಿ ಶೇ.46ರಷ್ಟು ಹೆಚ್ಚಳವಾಗಿದೆ.* ಇದೇ ಅವಧಿಯಲ್ಲಿ ನೇರ ತೆರಿಗೆಯ ಸರಾಸರಿ ಸಂಗ್ರಹವು ಶೇ.22.3ರಷ್ಟು ಏರಿಕೆಯಾಗಿದ್ದು, ಒಟ್ಟು 13.57 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ.* ಇದರಲ್ಲಿ ವೈಯಕ್ತಿಕ ಆದಾಯ ತೆರಿಗೆ 7.13 ಲಕ್ಷ ಕೋಟಿ ರೂ. ಹಾಗೂ ಕಾರ್ಪೊರೇಟ್ ತೆರಿಗೆ ಪಾಲು 6.11 ಲಕ್ಷ ಕೋಟಿ ರೂ. 2024-25 ವರ್ಷದಲ್ಲಿ ನೇರ ತೆರಿಗೆಗಳ ಮೂಲಕ 22.07 ಲಕ್ಷ ಕೋಟಿ ರೂ. ಸಂಗ್ರಹಿಸಲು ಕೇಂದ್ರ ಸರಕಾರವು ಬಜೆಟ್‌ನಲ್ಲಿ ಗುರಿ ನಿಗದಿಪಡಿಸಿದೆ.