* ಪ್ರತಿ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದರ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.* 2025ರ ಧ್ಯೇಯವಾಕ್ಯ (ಥೀಮ್):“ನ್ಯಾಯಯುತ ಮತ್ತು ಭರವಸೆಯ ಜಗತ್ತಿನಲ್ಲಿ ಯುವಜನರು ಬಯಸುವ ಕುಟುಂಬಗಳನ್ನು ರಚಿಸಲು ಅವರನ್ನು ಸಬಲೀಕರಣಗೊಳಿಸುವುದು” ಈ ಥೀಮ್ ಯುವಜನರಿಗೆ ಕುಟುಂಬ ಯೋಜನೆ ಕುರಿತು ಸಜ್ಜನ ಮಾಹಿತಿ ಮತ್ತು ಆಯ್ಕೆಗಳನ್ನು ನೀಡುವತ್ತ ಗಮನಹರಿಸುತ್ತದೆ.* ಜನಸಂಖ್ಯೆ ಹೆಚ್ಚಳದ ಪರಿಣಾಮವಾಗಿ ವಸತಿ, ಆರೋಗ್ಯ, ಶಿಕ್ಷಣ, ಪರಿಸರ, ಉದ್ಯೋಗಾವಕಾಶದ ಕೊರತೆ, ಬಡತನ ಮತ್ತು ನಿರುದ್ಯೋಗದಂತಹ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ಈ ಸಮಸ್ಯೆಗಳನ್ನು ಮನನ ಮಾಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.* 1987ರ ಜುಲೈ 11ರಂದು ವಿಶ್ವ ಜನಸಂಖ್ಯೆ ಐದು ಶತಕೋಟಿ ತಲುಪಿತು. ಇದನ್ನು ಗುರಿಯಾಗಿ 1989ರಲ್ಲಿ ಯುಎನ್ಡಿಪಿ ಈ ದಿನವನ್ನು ವಿಶ್ವ ಜನಸಂಖ್ಯಾ ದಿನವನ್ನಾಗಿ ಘೋಷಿಸಿತು.ಅತ್ಯಧಿಕ ಜನಸಂಖ್ಯೆ ಹೊಂದಿರುವ ದೇಶಗಳು (2025):- ಭಾರತ – 1.46 ಶತಕೋಟಿ- ಚೀನಾ – 1.42 ಶತಕೋಟಿ- ಅಮೆರಿಕ – 347 ಮಿಲಿಯನ್-ಇಂಡೋನೇಷ್ಯಾ, ಪಾಕಿಸ್ತಾನ, ನೈಜೀರಿಯಾ, ಬ್ರೆಜಿಲ್, ಬಾಂಗ್ಲಾದೇಶ, ರಷ್ಯಾ, ಇಥಿಯೋಪಿಯಾ* ವಿಶ್ವ ಜನಸಂಖ್ಯಾ ದಿನವು ಮಾನವ ಹಕ್ಕುಗಳು, ಕುಟುಂಬ ಯೋಜನೆ, ಮಹಿಳಾ ಆರೋಗ್ಯ, ಹಾಗೂ ತಲೆಮಾರಿನ ಭವಿಷ್ಯವನ್ನು ರೂಪಿಸಲು ಅವಶ್ಯಕವಾದ ನೀತಿ ಮತ್ತು ಜಾಗೃತಿ ರೂಪಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.