* ಜರ್ಮನಿಯಲ್ಲಿ ನಡೆಯುತ್ತಿರುವ ವಿಶ್ವ ಯೂನಿವರ್ಸಿಟಿ ಗೇಮ್ಸ್ನಲ್ಲಿ ಎರಡು ಬಾರಿ ಒಲಿಂಪಿಯನ್ ಆಗಿರುವ ಶ್ರೀಹರಿ ನಟರಾಜ್ ಅವರು ಪುರುಷರ 200 ಮೀ. ಫ್ರೀಸ್ಟೈಲ್ ಈಜಿನಲ್ಲಿ 1ನಿಮಿಷ 48.22 ಸೆಕೆಂಡುಗಳಲ್ಲಿ ಗುರಿ ತಲುಪಿದರು.* ಈ ಮೂಲಕ ಭಾರತದ ಶ್ರೇಷ್ಠ ಕಾಲಮಾನ ದಾಖಲಿಸಿ ಸೆಮಿಫೈನಲ್ಗೆ ಅರ್ಹತೆ ಪಡೆದರು. ಈ ಸಮಯವು ಅವರ ಹಿಂದಿನ ದಾಖಲೆಯನ್ನೇ ಮೀರಿದೆ.* ಕರ್ನಾಟಕದ ಇನ್ನೊಬ್ಬ ಈಜುಗಾರ ಅನೀಶ್ ಗೌಡ ತಮ್ಮ ಹೀಟ್ಸ್ನಲ್ಲಿ 1:52.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆದರೆ ಐದನೇ ಸ್ಥಾನ ಪಡೆದರೂ ಅವರು ಸೆಮಿಫೈನಲ್ಗೆ ಅರ್ಹರಾಗಲಿಲ್ಲ.* ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ನೆದರ್ಲೆಂಡ್ಸ್ ವಿರುದ್ಧ 3–1ರಿಂದ ಗೆದ್ದು ಪ್ರಿ ಕ್ವಾರ್ಟರ್ಫೈನಲ್ ಹಂತ ಪ್ರವೇಶಿಸಿತು. ಪುರುಷರ ತಂಡವು ಕೊಲಂಬಿಯಾ ವಿರುದ್ಧ 3–2ರಿಂದ ಗೆಲುವು ಸಾಧಿಸಿ ಮುಂದಿನ ಹಂತದಲ್ಲಿ ಚೀನಾ ತಂಡವನ್ನು ಎದುರಿಸಲು ಸಿದ್ಧವಾಗಿದೆ.* ಭಾರತದ ಬ್ಯಾಡ್ಮಿಂಟನ್ ಮಿಶ್ರ ತಂಡವು ಹಾಂಗ್ಕಾಂಗ್ ವಿರುದ್ಧ 2–3ರಿಂದ ಸೋತು ನಿರಾಶೆ ಮೂಡಿಸಿತು. ಮೊದಲ ಪಂದ್ಯದಲ್ಲಿ ಮಕಾವು ತಂಡದ ವಿರುದ್ಧ 5–0ರಿಂದ ಜಯ ಸಾಧಿಸಿದ್ದರು.* ಮಹಿಳೆಯರ ಸಿಂಗಲ್ಸ್ ಟೆನಿಸ್ನಲ್ಲಿ ಅಂಜಲಿ ರಾಠಿ ಉಗಾಂಡಾದ ಕ್ರಿಸ್ಟಿಯಾನಾ ವಿರುದ್ಧ 6-0, 6-0ರಿಂದ ಗೆಲುವು ಗಳಿಸಿ 32ರ ಘಟ್ಟ ಪ್ರವೇಶಿಸಿದರು. ವೈಷ್ಣವಿ ಅಡ್ಕರ್ ನೆದರ್ಲೆಂಡ್ಸ್ನ ಜೋಲಿಯನ್ ಮಾರಿಯಾವನ್ನು 6-1, 6-0ರಿಂದ ಸೋಲಿಸಿ ಮುಂದುವರಿದರು.