Loading..!

Back
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು

| Published on: 25 ಫೆಬ್ರುವರಿ 2019

Image not found

ksp police constable cut off marks 2018:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ಕೀ ಉತ್ತರಗಳನ್ನು ಅಧಿಕೃತವಾಗಿ ರಾಜ್ಯ ಪೊಲೀಸ ಇಲಾಖೆಯು ತನ್ನ ಜಾಲತಾಣದಲ್ಲಿ ಈಗಾಗಲೇ ಪ್ರಕಟಿಸಿದೆ. ಈ ಸಾಮಾನ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಈಗಾಗಲೇ ತಮ್ಮ ಅಂಕಗಳನ್ನು ಪರಿಶೀಲಿಸಿ, ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿ ನಿಮ್ಮ ಅಂಕಗಳನ್ನು ನಮೂದಿಸಿದ್ದೀರಿ. ಇಲ್ಲಿ ಸುಮಾರು 1530 ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ವತಹಃ ತಾವೇ ತಮ್ಮ ಅಂಕಗಳನ್ನು ನಮೂದಿಸಿದ್ದು ಅವರಿಗೆಲ್ಲರಿಗೂ kpscvaani ಕಡೆಯಿಂದ ಧನ್ಯವಾದಗಳು.

ksp police constable cut off marks 2018:

* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಪುರುಷ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ: >
ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 71 to 75 > ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 68 to 72 > ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 65 to 69 > ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 68 to 72 > ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 69 to 73 > SC ಅಭ್ಯರ್ಥಿಗಳಿಗೆ - 66 to 70 > ST ಅಭ್ಯರ್ಥಿಗಳಿಗೆ - 69 to 73 > CAT-1 ಅಭ್ಯರ್ಥಿಗಳಿಗೆ - 68 to 72
* ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಮಹಿಳೆ ಹುದ್ದೆಗಳ ನಿರೀಕ್ಷಿಸಬಹುದಾದ ಕಟ್ ಆಫ್ ಅಂಕಗಳು ಈ ಕೆಳಗಿನಂತಿವೆ: >
ಜನರಲ್ ಮೆರಿಟ್ ಅಭ್ಯರ್ಥಿಗಳಿಗೆ - 60 to 64 > ಹಿಂದುಳಿದ ವರ್ಗದ(OBC) 2A ಅಭ್ಯರ್ಥಿಗಳಿಗೆ - 55 to 58 > ಹಿಂದುಳಿದ ವರ್ಗದ(OBC) 2B ಅಭ್ಯರ್ಥಿಗಳಿಗೆ - 50 to 55 > ಹಿಂದುಳಿದ ವರ್ಗದ(OBC) 3A ಅಭ್ಯರ್ಥಿಗಳಿಗೆ - 55 to 58 > ಹಿಂದುಳಿದ ವರ್ಗದ(OBC) 3B ಅಭ್ಯರ್ಥಿಗಳಿಗೆ - 57 to 61 > SC ಅಭ್ಯರ್ಥಿಗಳಿಗೆ - 52 to 56 > ST ಅಭ್ಯರ್ಥಿಗಳಿಗೆ - 54 to 58 > CAT-1 ಅಭ್ಯರ್ಥಿಗಳಿಗೆ - 55 to 59
ವಿಶೇಷ ಸೂಚನೆಗಳು :-
* ನಾವು ಸಾಮಾನ್ಯವಾಗಿ ರಾಜ್ಯದ ಎಲ್ಲ ಅಭ್ಯರ್ಥಿಗಳಿಂದ ಅಂಕಗಳನ್ನು ಸಂಗ್ರಹಿಸಿದ್ದೇವೆ. ಆದರೆ ಜಿಲ್ಲಾವಾರು ಕಟ್ ಆಫ್ ಅಂಕಗಳು ಬೇರೆ-ಬೇರೆಯಾಗಿರುತ್ತವೆ ಹಾಗಾಗಿ ನಾವು ಪ್ರಕಟಿಸಿದ ಕಟ್-ಆಫ್ ಅಂಕಗಳನ್ನು ಸಾಮಾನ್ಯವಾಗಿ ಪರಿಗಣಿಸಿ, ಇದು ನಿರ್ದಿಷ್ಟವಾಗಿ ಯಾವುದೇ ಜಿಲ್ಲೆಗೆ ಅನ್ವಯಿಸುವದಿಲ್ಲ. ಬರುವ ಪರೀಕ್ಷೆಗಳಲ್ಲಿ ಜಿಲ್ಲಾವಾರು ಅಂಕಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತೇವೆ.
* ಕನ್ನಡ ಮಾಧ್ಯಮ, ಗ್ರಾಮೀಣ, ಮತ್ತು ಪಿಡಿಪಿ(PDP), ಮಾಜಿ ಸೈನಿಕ ಅಭ್ಯರ್ಥಿಗಳ ಅಂಕಗಳು ವ್ಯತ್ಯಾಸವಾಗಬಹುದು.
* ಈ ಕಟ್ ಆಫ್ ಸ್ಕೋರನ್ನು 1 : 1 ಅನುಪಾತದಲ್ಲಿರುವಂತೆ ರಚಿಸಲಾಗಿದೆ.(ದೈಹಿಕ ಪರೀಕ್ಷೆಗೆ 1:5 ಅನುಪಾತದಲ್ಲಿರುವಂತೆ ಪಟ್ಟಿ ಪ್ರಕಟವಾಗುವದರಿಂದ ಕಟ್ ಆಫ್ ಸ್ಕೋರ್ ಇದಕ್ಕಿಂತ ತುಂಬಾ ಕಡಿಮೆ ಬರುತ್ತದೆ)
* ಅಂಕ ನಮೂದಿಸುವಾಗ ಕೆಲವು ಅಭ್ಯರ್ಥಿಗಳಿಗೆ ಗೊಂದಲಗಳು ಉಂಟಾಗಿ, ಅವರು ನಮೂದಿಸಿರುವ ಅಂಕಗಳು ಸರಿಯಾಗಿ ಇರದೇ ಇರಬಹುದು. ಹಾಗಾಗಿ ಅಭ್ಯರ್ಥಿಗಳು ನಮೂದಿಸಿದ ಅಂಕಗಳು ಸರಿಯಾಗಿವೆ ಎಂಬ ನಿಖರತೆ ಇಲ್ಲ.
* ನಾವು ಪ್ರಕಟಿಸಿದ ಅಂಕಗಳು ಕೇವಲ KPSCVaani ಯು ಅಭಿಪ್ರಾಯವಾಗಿದ್ದು, ಇವು ಅಂತಿಮವಾಗಿ KSPಯು (ಕರ್ನಾಟಕ ಸ್ಟೇಟ್ ಪೊಲೀಸ್ ಡಿಪಾರ್ಟಮೆಂಟ್) ಪ್ರಕಟಿಸುವ ಕಟ್-ಆಫ್ ಅಂಕಗಳೊಂದಿಗೆ ವ್ಯತ್ಯಾಸವಾಗಬಹುದು.
* ನಿರೀಕ್ಷಿಸಿದ ಕಟ್-ಆಫ್ ಅಂಕಗಳನ್ನು ಪಡೆದಿಲ್ಲವೆಂದು ಅಭ್ಯರ್ಥಿಗಳು ಯಾವುದೇ ಬೇಸರ ಪಡುವ ಅಗತ್ಯವಿಲ್ಲ ಇದು ಕೇವಲ ತಾತ್ಕಾಲಿಕವಾಗಿದ್ದು ಅಂತಿಮ ಅಂಕಗಳೊಂದಿಗೆ ಹೋಲಿಸಿದಾಗ ತಮ್ಮ ಅಂಕಗಳು ಕೂಡ ಪರಿಗಣನೆಗೆ ಬರಬಹುದು.
* ನಿಮ್ಮ ಅಭಿಪ್ರಾಯಗಳನ್ನು kpscvaani@gmail.com ಗೆ ಈ-ಮೇಲ್ ಮಾಡುವ ಮೂಲಕ ತಿಳಿಸಿ. ಧನ್ಯವಾದಗಳು. ksp police constable cut off marks 2018:
References: * 1536 users exam score provided by users in kpscvaani prediction
* previous selection lists from the official website of KSP

ksp police constable cut off marks 2018: