Loading..!

Back
ರಾಜ್ಯ ಸರ್ಕಾರೀ ನೇಮಕಾತಿ ಪ್ರಕ್ರಿಯೆಗಳ ಮೇಲೆ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಪರಿಣಾಮ ಬಿರುವುದೇ...? ಈ ಕುರಿತ ಮಾಹಿತಿ ನಿಮಗಾಗಿ

| Published on: 10 ಮಾರ್ಚ್ 2019

Image not found

ಆತ್ಮೀಯ ಸ್ನೇಹಿತರೆ, ಕೇಂದ್ರ ಚುನಾವಣಾ ಆಯೋಗವು ದಿನಾಂಕ 29-03-2023 ರಂದು ಪತ್ರಿಕಾ ಭೇಟಿ ಏರ್ಪಡಿಸಿ ವಿಧಾನಸಭಾ ಚುನಾವಣಾ ನೀತಿ ಸಂಹಿತೆಯಿಂದ ಹಿಡಿದು ಚುನಾವಣಾ ಪಲಿತಾಂಶದವರಿಗೂ ದಿನಾಂಕಗಳನ್ನು ಪ್ರಕಟಿಸಿತು, ಇದೀಗ ನಮ್ಮ ಸುಮಾರು ಜನ ಸ್ಪರ್ಧಾರ್ಥಿಗಳಿಗೆ ಒಂದೇ ಸಮಸ್ಯೆ "ಸರ್ ಇವತ್ತಿನಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ ಇದರಿಂದ ನೇಮಕಾತಿ ಪ್ರಕ್ರಿಯೆಗಳು ಮತ್ತಷ್ಟು ವಿಳಂಬವಾಗಲಿವೆ..? ಮತ್ತು ಅದು ಯಾವ ರೀತಿ ಪರಿಣಾಮ ಬೀರುತ್ತದೆ" ಎಂದು ನಮಗೆ Email, WhatsApp ಗಳಲ್ಲಿ ಪ್ರಶ್ನಿಸುತ್ತಿದ್ದೀರಿ, ಈ ನಿಮ್ಮ ಗೊಂದಲವನ್ನು ನಮಗೆ ತಿಳಿದ ಮಟ್ಟಿಗೆ ಪರಿಹರಿಸಲು ಪ್ರಯತ್ನಿಸುತ್ತೇವೆ. ಈ ಲೇಖನವನ್ನು ಕೊನೆವರೆಗೂ ಓದಿ.
Karnataka Code of conduct effect for govt jobs

ಸ್ನೇಹಿತರೆ, ಚುನಾವಣಾ ನೀತಿ ಸಂಹಿತೆ ದಿನಾಂಕ 29-03-2023 ರಿಂದ ಜಾರಿಗೆ ಬಂದಿದೆ, ಈ ಕುರಿತು ಕೇಂದ್ರ ಚುನಾವಣಾ ಆಯೋಗವು ಪತ್ರಿಕಾ ಭೇಟಿಯನ್ನು (press meet) ಕರೆದು ಅಧಿಕೃತವಾಗಿ ಪ್ರಕಟಿಸಿ ಆಗಿದೆ, ಈಗಾಗಲೇ ಅಧಿಸೂಚನೆ ಹೊರಡಿಸಲಾದ ನೇಮಕಾತಿ ಪ್ರಕ್ರಿಯೆಗಳು ಯಥಾ ರೀತಿ ಮುಂದುವರೆಯುತ್ತವೆ ಈ ಕುರಿತು ಯಾವುದೇ ಗೊಂದಲ ಬೇಡ, ಅಂದರೆ ನೇಮಕಾತಿ ಹಂತಗಳಾದ ಲಿಖಿತ ಪರೀಕ್ಷೆಗಳು, ದೈಹಿಕ ಪರೀಕ್ಷೆಗಳು, ವೈದ್ಯಕೀಯ ಪರೀಕ್ಷೆಗಳು, ಆಯ್ಕೆ ಪಟ್ಟಿಗಳ ಪ್ರಕಟಣೆಯಂತಹ ಪ್ರಕಿಯೆಗಳು ಯಾವುದೇ ತೊಂದರೆಯಿಲ್ಲದೆ ಮುಂದುವರಿಯಲಿವೆ, ಈ ಕುರಿತು ಕೇಂದ್ರ ಚುನಾವಣಾ ಆಯೋಗವೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂದರೆ ಕೇಂದ್ರ ಲೋಕ ಸೇವಾ ಆಯೋಗ(UPSC), ರಾಜ್ಯ ಲೋಕ ಸೇವಾ ಆಯೋಗಗಳು(SPSC), ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ನಂತಹ ಶಾಸನಬದ್ಧ ಸಂಸ್ಥೆಗಳು (statutory authority bodies) ತಮ್ಮ ಶಾಸನಬದ್ಧ ಅಧಿಕಾರವನ್ನು ಮುಂದುವರೆಸಿಕೊಂಡು ಹೋಗಬಹುದು, ಹಾಗಾಗಿ ವಿವಿಧ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವುದೇ ಪ್ರಕಿಯೆಗಳು ವಿಳಂಬವಾಗುವದೆಂಬ ಭಯವಿಲ್ಲದೆ ತಯಾರಿ ಮುಂದುವರೆಸಿ. 
ಆದರೆ ಈ ನಿಯಮವು ಶಾಸನಬದ್ಧವಲ್ಲದ ಸಂಸ್ಥೆಗಳಿಗೆ(non-statutory bodies) ಅನ್ವಯಿಸುವದಿಲ್ಲ, ಶಾಸನಬದ್ಧವಲ್ಲದ ಸಂಸ್ಥೆಗಳು ಯಾವುದೇ ಪ್ರಕ್ರಿಯೆಗೂ ಮುನ್ನ ಚುನಾವಣಾ ಆಯೋಗದ ಅನುಮತಿ ಪಡೆದು, ಅನುಮತಿ ದೊರೆತರೆ ಮಾತ್ರ ಪ್ರಕ್ರಿಯೆಗಳನ್ನು ಮುಂದುವರೆಸಬಹುದು ಎಂದು ಚುನಾವಣಾ ಆಯೋಗವು ತನ್ನ ಪ್ರಕಟಣೆಯಲ್ಲಿ ಈ ಮೊದಲು ತಿಳಿಸಿದೆ. ಈಗಾಗಲೇ ಸುಮಾರು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಗಳು ಪ್ರಕಟಗೊಂಡು ಅರ್ಜಿ ಸಲ್ಲಿಸುವ ಪ್ರಕ್ರಿಯೂ ಜಾರಿಯಲ್ಲಿದೆ ಅಭ್ಯರ್ಥಿಗಳು ತಮ್ಮ ಅರ್ಹತೆಗನುಗುಣವಾದ ಹುದ್ದೆಗಳಿಗೆ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ ಮತ್ತು ನಿಮ್ಮ ತಯಾರಿ ಮುಂದುವರೆಸಿ ಕೆಲವೇ ದಿನಗಳಲ್ಲಿ ಈ ನೇಮಕಾತಿಗಳ ಪರೀಕ್ಷೆಗಳು ಆರಂಭವಾಗಲಿವೆ ಚುನಾವಣೆಯ ಬಗ್ಗೆ ಬಹಳ ತಲೆ ಕೆಡೆಸಿಕೊಳ್ಳುವ ಅಗತ್ಯವಿಲ್ಲಾ ಮೊದಲು ನಿಮ್ಮ ಗುರಿಯೆಡೆಗೆ ಗಮನವಿಟ್ಟು ಅಭ್ಯಾಸ ಮುಂದುವರೆಸಿದ್ದೆ ಆದಲ್ಲಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿಯಾಗಿರುತ್ತದೆ.

 
- ಈ ಕುರಿತ ಮಾಹಿತಿಗಾಗಿ ಆಯೋಗದ ಅಧಿಕೃತ ಪ್ರಕಟಣೆ "Manual on Model Code of Conduct - March, 2019 Document 21 - Edition 1" ಯ ಪುಟ ಸಂಖ್ಯೆ 36, 37 ಗಳನ್ನೂ ಗಮನಿಸಬಹುದು. 
 
CHAPTER 5 ANNOUNCEMENT OF NEW SCHEMESRESTRICTION ON FINANCIAL & ADMINISTRATIVE MATTERS 
(xii) Regular recruitment or appointment or promotion through 37 “No voter to be left behind” the UPSC, State Public Service Commissions or Staff Selection Commission or any other statutory authority can continue. Recruitments through non-statutory bodies will require prior clearance of the Election Commission
5.8.2 The policy of the Election Commission, has been that it does not object to the appointments/regular recruitment / promotions made on the results or recommendations of the Union or State Public Service Commissions, Staff Selection Commission or other such statutory bodies or regular promotions on the recommendations of departmental promotion committees
5.8.3 Recruitment through non-statutory bodies will require prior clearance of the Election Commission code of conduct effect for govt jobs 
References: "Manual on Model Code of Conduct - March, 2019 Document 21 - Edition 1" ಯ ಪುಟ ಸಂಖ್ಯೆ 36, 37, 42

code of conduct effect for govt jobs